Urdu   /   English   /   Nawayathi

ಪಾಕಿಸ್ತಾನ ನೂತನ ಸಂಸತ್ ಅಧಿವೇಶನ ಆರಂಭ : 331 ಸಂಸದರ ಪ್ರಮಾಣ

share with us

ಇಸ್ಲಾಮಾಬಾದ್: 14 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಸಂಸತ್ತಿನ ಮೊದಲ ಅಧಿವೇಶನ ಇಂದು ಆರಂಭವಾಗಿದ್ದು, ಹೊಸದಾಗಿ ಚುನಾಯಿತವಾದ 331 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಪಾಕಿಸ್ತಾನ ಸಂಸತ್ 342 ಸಂಖ್ಯಾ ಬಲ ಹೊಂದಿದ್ದು, ನಿರ್ಗಮಿಸಲಿರುವ ಸ್ಫೀಕರ್ ಆಯಾಜ್ ಸಾದಿಕ್ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ರಾಷ್ಟ್ರಾಧ್ಯಕ್ಷ ಮಮ್ನೂನ್ ಹಸನ್ ಅವರು ಇಂದು ಬೆಳಗ್ಗೆ 10 ಗಂಟೆಗೆ 15ನೇ ಸಂಸತ್ ಅಧಿವೇಶನಕ್ಕೆ ಚಾಲನೆ ನೀಡಿದ ನಂತರ. ಸಂಸತ್ತಿನ ಕೆಳಮನೆಯಲ್ಲಿ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ನೋಂದಣಿ ಪುಸ್ತಕಕ್ಕೆ ಸಹಿ ಮಾಡಿದರು. ಸಾರ್ವತ್ರಿಕ ಚುನಾವಣೆ ನಡೆದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ 19 ದಿನಗಳ ಬಳಿಕ ಸಂಸತ್ ಅಧಿವೇಶ ವಿದ್ಯುಕ್ತವಾಗಿ ಆರಂಭವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا