Urdu   /   English   /   Nawayathi

ಸದ್ದಿಲ್ಲದೇ ಫಾಲೋ ಮಾಡುತ್ತಿದೆ ಗೂಗಲ್‌!

share with us

ಸ್ಯಾನ್‌ಫ್ರಾನ್ಸಿಸ್ಕೋ: 14 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ನಾವು ಮುಂದೆ ಹೆಜ್ಜೆ ಇಡುತ್ತಿದ್ದರೆ, ಸದ್ದಿಲ್ಲದೇ ನಮ್ಮ ಹಿಂದೆಯೇ "ಗೂಗಲ್‌' ಹೆಜ್ಜೆ ಗುರುತು ಸಂಗ್ರಹಿಸುತ್ತಾ ಬರುತ್ತಿದೆ...! ಈ ಬಗ್ಗೆ ಆಸೋಸಿಯೇಟೆಡ್‌ ಪ್ರಸ್‌ ವರದಿ ಮಾಡಿದ್ದು, ಜಗತ್ತಿನಾದ್ಯಂತ 2 ಶತಕೋಟಿ ಜನರ ಚಲನವಲನ ಸಂಗ್ರಹಿಸುತ್ತಿದೆ ಎಂದು ಹೇಳಿದೆ. ಪ್ರಿನ್ಸೆಟಾನ್‌ನ ಕಂಪ್ಯೂಟರ್‌ ಸೈನ್ಸ್‌ ಸಂಶೋಧಕರೂ ಗೂಗಲ್‌ನ ನಿಗಾ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷವಷ್ಟೇ ಗೂಗಲ್‌ ಮ್ಯಾಪ್‌ನಲ್ಲಿ ಟೈಮ್‌ಲೈನ್‌ ಅನ್ನು ಪರಿಚಯಿಸಿದ್ದು, ಇದರ ಬಳಕೆದಾರರು ಎಲ್ಲಿಗೆ ಹೋಗುತ್ತಾರೆ, ಬರುತ್ತಾರೆ ಎಂಬಿತ್ಯಾದಿಯಾಗಿ ಎಲ್ಲ ಸಂಗತಿಗಳನ್ನು ಸಂಗ್ರಹಿಸಿಡುತ್ತದೆ. ಆದರೆ, ಈ ಫೀಚರ್‌ ಇಷ್ಟವಿಲ್ಲದೇ ಇರುವವರು ಆಫ್ ಮಾಡಿಕೊಳ್ಳುವ ಅವಕಾಶವನ್ನೂ ಗೂಗಲ್‌ ನೀಡಿತ್ತು. ಇದರ ಜತೆಗೆ ಲೋಕೇಶನ್‌ ಹಿಸ್ಟರಿಯನ್ನೂ ಆಫ್ ಮಾಡಿದಲ್ಲಿ ನಾವು ನಿಮ್ಮ ಲೋಕೇಶನ್‌ ಸಂಗತಿಗಳನ್ನು ಸ್ಟೋರ್‌ ಮಾಡಲ್ಲ ಎಂದೂ ಹೇಳಿತ್ತು. ಇದೀಗ ಟೈಮ್‌ಲೈನ್‌ ಸ್ಟೋರೇಜ್‌ ಫೀಚರ್‌ ಅನ್ನು ಆಫ್ ಮಾಡಿದರೂ ಗೂಗಲ್‌ ನಮ್ಮ ಎಲ್ಲಾ "ನಡೆ'ಗಳನ್ನು ಸಂಗ್ರಹಿಸಿಡುತ್ತಿದೆ ಎಂದು "ಎಪಿ' ಬಹಿರಂಗ ಮಾಡಿದೆ. 

ಆ್ಯಂಡ್ರಾಯ್ಡ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿರುವ ಸುಮಾರು 2 ಶತಕೋಟಿ ಜನರಿಗೆ ಈ ಸಮಸ್ಯೆ ತಟ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದಷ್ಟೇ ಅಲ್ಲ, ಐಫೋನ್‌ನಲ್ಲೂ ಗೂಗಲ್‌ ಮ್ಯಾಪ್‌ ಬಳಕೆ ಮಾಡುತ್ತಿರುವವರೂ ಈ ಖಾಸಗಿತನ ಸಮಸ್ಯೆ ಎದುರಿಸುತ್ತಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿರುವ ಗೂಗಲ್‌ ಸಂಸ್ಥೆ, ಜನರ ಅನುಭವ ಉತ್ತಮ ಪಡಿಸುವ ಸಲುವಾಗಿ ಹಲವಾರು ರೀತಿಯಲ್ಲಿ ಲೊಕೇಶನ್‌ ಮಾಹಿತಿ ಬಳಕೆ ಮಾಡುತ್ತಿ ದ್ದೇವೆ ಎಂದಿದೆ. ಅಂದರೆ, ಲೋಕೇಶನ್‌ ಹಿಸ್ಟರಿ, ವೆಬ್‌ ಆ್ಯಂಡ್‌ ಆ್ಯಪ್‌ ಆ್ಯಕ್ಟಿವಿಟಿ ಮತ್ತು ಡಿವೈಸ್‌ ಲೆವೆಲ್‌ ಲೊಕೇಶನ್‌ ಸರ್ವೀಸಸ್‌ ಮೂಲಕ ಮಾಹಿತಿ ಪಡೆಯಲಾಗುತ್ತಿದೆ ಎಂದಿದೆ. ಅಲ್ಲದೆ ಜನ ಯಾವಾಗ ಬೇಕಾದರೂ ತಮ್ಮ ಲೊಕೇಶನ್‌ ಹಿಸ್ಟರಿಯನ್ನು ಡಿಲೀಟ್‌ ಮಾಡಬಹುದಾಗಿದೆ ಎಂದೂ ಹೇಳಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا