Urdu   /   English   /   Nawayathi

ಭಾರತವನ್ನು ಧರ್ಮಶಾಲೆಯಾಗಿಸಲು ಬಯಸುತ್ತಿದ್ದೀರಾ; ಕಾಂಗ್ರೆಸ್'ಗೆ ಛತ್ತೀಸ್ಗಢ ಸಿಎಂ ಪ್ರಶ್ನೆ

share with us

ನವದೆಹಲಿ: 12 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಾರತವನ್ನು ಧರ್ಮಶಾಲೆಯಾಗಿಸಲು ಬಯಸುತ್ತಿದ್ದೀರಾ? ಕೆಲವರು ಬಲವಂತದಿಂದ ದೇಶಕ್ಕೆ ಬಂದು, ದೇಶವನ್ನು ತಮ್ಮ ಸಂಪನ್ಮೂಲಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 
ಅಸ್ಸಾಂ ಎನ್ಆರ್'ಸಿ ವಿವಾದ ಸಂಬಂಧ ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತವನ್ನು ಧರ್ಮಶಾಲೆಯಾಗಿಸಲು ಬಯಸುತ್ತಿದ್ದೀರಾ? ಕೆಲವರು ಅಕ್ರಮವಾಗಿ ದೇಶಕ್ಕೆ ಬರುತ್ತಿದ್ದಾರೆ ಮತ್ತು ದೇಶವನ್ನು ತಮ್ಮ ಸಂಪನ್ಮೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಜನರು ತಮ್ಮ ತಮ್ಮ ದೇಶಕ್ಕೆ ವಾಪಸ್ಸಾಗಬೇಕು. ದೇಶ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 

ಎನ್ಆರ್'ಸಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ, ದೇಶದಲ್ಲಿ ಆಶ್ರಯ ಅರಸಿ ಬರುವ ಪ್ರತೀಯೊಬ್ಬರನ್ನೂ ಭಾರತ ಸ್ವಾಗತಿಸುತ್ತದೆ. ಆಶ್ರಯ ಅರಸಿಕೊಂಡು ಭಾರತಕ್ಕೆ ಬರುವವರನ್ನು ನಾವೆಂದಿಗೂ ಹಿಂದಕ್ಕೆ ತಳ್ಳಿಲ್ಲ. ಕೆಲವರು ದೇಶಕ್ಕೆ ಅತಿಥಿಗಳಾಗಿ ಬಂದರೆ, ಇನ್ನೂ ಕೆಲ ಬಡವರು ಆಶ್ರಯ ಅರಸಿ ಬರುತ್ತಾರೆ. ಅಂತಹವರನ್ನು ನಾವು ದೇಶದಲ್ಲಿಟ್ಟುಕೊಳ್ಳಬೇಕು. ಅವರಿಗೆ ಭದ್ರತೆ ಹಾಗೂ ಸುರಕ್ಷತೆಗಳನ್ನು ನೀಡಬೇಕೆಂದು ಹೇಳಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا