Urdu   /   English   /   Nawayathi

ಪಾಕ್‌ ಗಾಯಕಿ, ನಟಿಯ ಬರ್ಬರ ಹತ್ಯೆ ; ವರ್ಷದೊಳಗೆ 15 ನೇ ಪ್ರಕರಣ

share with us

ಇಸ್ಲಮಾಬಾದ್‌: 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ಥಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕಲಾವಿದೆಯರ ಹತ್ಯೆ ಮುಂದುವರಿದಿದ್ದು, ನೌಶೇರಾ ಕಾಲನ್‌ ಪ್ರದೇಶದಲ್ಲಿ ನಟಿ ಮತ್ತು ಗಾಯಕಿ ರೇಷ್ಮಾ ಅವರನ್ನು ಆಕೆಯ ಪತಿಯೇ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದ ರೇಷ್ಮಾ ಅವರನ್ನು ಆಕೆಯ ಪತಿ ಮನೆಗೆ ನುಗ್ಗಿ ಗುಂಡಿಟ್ಟು ಹತ್ಯೆಗೈದಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. ಆರೋಪಿಗೆ ರೇಷ್ಮಾ ನಾಲ್ಕನೇ ಪತ್ನಿಯಾಗಿದ್ದಳು ಎನ್ನುವ ವಿಚಾರವು ತಿಳಿದು ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು , ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. 

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ  ಈ ರೀತಿಯಲ್ಲಿ  15 ಮಂದಿಯನ್ನು ಹತ್ಯೆಗೈದಿರುವ ಬೆಚ್ಚಿ ಬೀಳಿಸುವ ವಿವರಗಳು ಲಭ್ಯವಾಗಿದೆ. ಫೆಬ್ರವರಿ 3 ರಂದು ನಟಿ ಸನ್‌ಬುಲ್‌ ಎಂಬಾಕೆಯನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا