Urdu   /   English   /   Nawayathi

ಚೀನಾದಲ್ಲಿ ಚರ್ಚ್‌ಗಳ ಮೇಲೆ ಸರಕಾರದ ದಾಳಿ

share with us

ಬೀಜಿಂಗ್‌: 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಇಸ್ಲಾಂ ನಂತರ ಈಗ ಕ್ರೈಸ್ತ ಧರ್ಮದ ಮೇಲೆ ಪ್ರಹಾರ ನಡೆಸಲು ಚೀನಾ ಹೊರಟಿದೆ. ಅಲ್ಲಿನ ಚರ್ಚ್‌ಗಳ ಮೇಲೆ ದಾಳಿ ನಡೆಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಚೀನಾ ಸರಕಾರ ಹತ್ತಿಕ್ಕುತ್ತಿದೆ. ಚೀನಾ ಅಧಿಕಾರಿಗಳು ಚರ್ಚುಗಳ ಮೇಲೆ ದಾಳಿ ನಡೆಸುತ್ತಿದ್ದು, ಚರ್ಚ್‌ಗಳು ಮತ್ತು ಪಾದ್ರಿಗಳು ನೋಂದಣಿ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಜೀಸಸ್‌ ಚಿತ್ರದ ಬದಲಿಗೆ ಕ್ಸಿ ಜಿನ್‌ಪಿಂಗ್‌ ಅವರ ಚಿತ್ರವನ್ನು ಇಡುವಂತೆ ಅವರನ್ನು ಪ್ರೇರೇಪಿಸಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಧಾರ್ಮಿಕ ವ್ಯವಹಾರಗಳ ಹೊಸ ನಿಯಮಗಳ ಮೂಲಕ ಕ್ರಿಶ್ಚಿಯನ್‌ ಧರ್ಮದ 'ಮಲೀನತೆ ತೊಲಗಿಸಲು' ಐದು ವರ್ಷಗಳ ಯೋಜನೆಯನ್ನು ಇತ್ತೀಚಿಗೆ ಚೀನಾ ಘೋಷಿಸಿದೆ. ಕಳೆದ ಕೆಲವು ತಿಂಗಳಲ್ಲಿ ಸಾವಿರಾರು ಚರ್ಚುಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಜತೆಗೆ ಬೈಬಲ್‌ಗಳನ್ನು ವಶಪಡಿಸಿಕೊಂಡಿದ್ದು, ಇ-ಕಾಮರ್ಸ್‌ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದ್ದಾರೆ. ಆದರೂ ಚೀನಾದಲ್ಲಿ ಕ್ರಿಸ್ಟಿಯನ್ನರು ರಹಸ್ಯವಾಗಿ ತಮ್ಮ ಧಾರ್ಮಿಕರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ''ಧಾರ್ಮಿಕ ವಿಧಾನಗಳ ಮೂಲಕ ವಿದೇಶಿ ಆಕ್ರಮಣದ ವಿರುದ್ಧ ನಾವು ದೃಢವಾಗಿ ಕಾಳಜಿ ವಹಿಸಬೇಕು,'' ಎಂದು ಇತ್ತೀಚಿಗೆ ನಡೆದ ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದರು. ಚೀನಾದಲ್ಲಿ 67 ದಶಲಕ್ಷ ಕ್ರಿಶ್ಚಿಯನ್ನಿದ್ದಾರೆ. ಚೀನಾದ ಧಾರ್ಮಿಕ ನೀತಿಗೆ ಬೇಸತ್ತು ಅನೇಕ ಪಾದ್ರಿಗಳು ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا