Urdu   /   English   /   Nawayathi

ಬೆಂಗಳೂರು: ಈ ಸರಗಳ್ಳನ ಬಳಿ ಇತ್ತು 'ಚಿನ್ನದ ಗಣಿ'!

share with us

ಬೆಂಗಳೂರು: 08 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಸರಗಳ್ಳತನ ನಡೆಸಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಅಲಿಯಾಸ್‌ ಗಣಿ (38) ಯನ್ನು ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರು ವೆಸ್ಟ್-ಡಿವಿಷನ್ ಪೊಲೀಸರು ಕಳ್ಳ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಅವನನ್ನು ಬಂಧಿಸಿದ್ದಾರೆ. ಬಂಧಿತನಿಂದ 1.6 ಕೋಟಿ ಮೌಲ್ಯದ  3 ಕೆ.ಜಿ 543 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 105 ಪ್ರಕರಣಗಳಲ್ಲಿ ಬೇಕಾಗಿದ್ದ ಅಚ್ಯುತ್ ಕುಮಾರ್ ಧಾರವಾಡ ಜಿಲ್ಲೆ ಕೋಳಿವಾಡ ಗ್ರಾಮದವನಾಗಿದ್ದಾನೆ. ಈತ ಮೈಸೂರಿನ  ಕುಂಬಳಗೋಡು ಬಳಿಯ ಕಣ್‌ಮಿಣಿಕೆ ಗ್ರಾಮದಲ್ಲಿ ನೆಲೆಸುಇದ್ದನು. ಸರಗಳವನ್ನೇ ಉದ್ಯೋಗವಾಗಿಸಿಕೊಂಡಿದ್ದ ಈತ ಬೈಕ್ ನಲ್ಲಿ ತೆರಳಿ ಒಂಟಿಯಾಗಿಯೇ ಸರಗಳ್ಳತನ ಮಾಡಿಕೊಂಡಿದ್ದ, ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಳ್ಳುತ್ತಿದ ಇತ ಕಳ್ಳತನದಿಂದ ಸಂಪಾದಿಸಿದ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದ.


ಹುಬ್ಬಳ್ಳಿಯವನಾಗಿದ್ದ ಈತ ನಿಯಮಿತವಾಗಿ ಬೆಂಗಳೂರಿಗೆ ಬಂದು ಸರಗಳ್ಳತನ ನಡೆಸಿ ಪರಾರಿಯಾಗುತ್ತಿದ್ದ.  ಇನ್ನು ತಾನು ಕಳವು ಮಾಡಿದ ಚಿನ್ನಾಭರಣಗಳನ್ನು ಕೊಪ್ಪಳದ ವ್ಯಕ್ತಿಯೊಬ್ಬನಿಗೆ ನಿಡುತ್ತಿದ್ದು ಆ ವ್ಯಕ್ತಿ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ನಡೆಸಿ ಹಣವನ್ನು ಅಚ್ಯುತ್ ಗೆ ಒದಗಿಸುತ್ತಿದ್ದ.

ಆರೊಪಿಗೆ ಆತನ ಪತ್ನಿ ಸಹ ಸಹಕರಿಸಿದ್ದಳು ಎನ್ನುವ ಪೋಲೀಸರು ಜೂನ್ 17ರಂದು ಜ್ಞಾನಭಾರತಿ ಠಾಣೆ ಪೊಲೀಸ್‌ ಪೇದೆ ಚಂದ್ರಕುಮಾರ್‌ ಆರೋಪಿಯನ್ನು ಅನುಮಾನದ ಮೇಲೆ ವಶಕ್ಕೆ ಪಡೆದಿದ್ದರು. ನಂತರ ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ಅವರಿಂದ ತಪ್ಪಿಸಿಕೊಂಡ ಅಚ್ಯುತ್ ನನ್ನು ನೈಸ್‌ ರಸ್ತೆಯಲ್ಲಿ ಮತ್ತೆ ಪತ್ತೆ ಮಾಡಲಾಗಿತ್ತು. ಆಗ ಪೋಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಅವನನ್ನು ವಶಕ್ಕೆ ಪಡೆಯಲಾಗಿತ್ತು.15 ದಿನಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ  ಅಚ್ಯುತ್ ನನ್ನು ಕಾಣಲು ಆತ್ನ ಪತ್ನಿ ಸಹ ಆಸ್ಪತ್ರೆಗೆ ಬರುತ್ತಿದ್ದಳು. ಆದರೆ ಪೋಲೀಸರು ವಿಚಾರಣೆ ನಡೆಸಬೇಕೆನ್ನುವಷ್ಟರಲ್ಲಿ ಆಕೆ ಸಹ ತಪ್ಪಿಸಿಕೊಂಡಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

"ಪ್ರತಿ ಬಾರಿ ಜೈಲಿನಿಂದ ಹೊರಬಂದ ನಂತರ, ಅವನು ತನ್ನ ಮನೆಯನ್ನು ಬದಲಿಸುತ್ತಿದ್ದ. ವಿಳಾಸ ಬದಲಿಸುವ ಮಾಹಿತಿಯನ್ನೆಂದೂ ಅವನು ಪೋಲೀಸರಿಗೆ ತಿಳಿಸಲಿಲ್ಲ.ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವನು ದಾಲಿ ನಡೆಸಿ ಸರಗಳನ್ನು ಕದಿಯುತ್ತಿದ್ದ.ಷಾರಾಮಿ ಕಾರುಗಳು, ಬುಲೆಟ್‌ , ಪಲ್ಸರ್‌ ಬೈಕ್‌ಗಳನ್ನು ಆತ ಬಳಸುತ್ತಿದ್ದ." ಪೋಲೀಸರು ಮಾಹಿತಿ ನೀಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا