Urdu   /   English   /   Nawayathi

ಇನ್ನು ಮೋದಿ ಮಾತಿಗೆ ಜನ ಮೂರ್ಖರಾಗುವುದಿಲ್ಲ: ರಾಹುಲ್‌

share with us

ಹೊಸದಿಲ್ಲಿ: 08 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿಯವರ ‘ಅಚ್ಛೇ ದಿನ್‌’ ಘೋಷಣೆಯ ಆಟ ಇನ್ನು ನಡೆಯುವುದಿಲ್ಲ. ಅವರ ಹುಸಿ ಭರವಸೆಗಳನ್ನು ಜನ ನಂಬುವ ಕಾಲ ಈಗ ಮುಗಿದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ‘‘ಈ ದೇಶದ ಸ್ಥಿತಿ ನಿರಂಕುಶವಾದಿ, ಅಸಮರ್ಥ ಹಾಗೂ ಉದ್ಧಟ ಚಾಲಕನ ಸುಪರ್ದಿಗೆ ಸಿಕ್ಕ ದುರಂತ ರೈಲಿನಂತಾಗಿದೆ,’’ ಎಂದು ಮೋದಿಯವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. 

ಸಂಸತ್‌ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷ (ಸಿಪಿಪಿ)ದ ಸಭೆಯಲ್ಲಿ ಮಾತನಾಡಿದ ರಾಹುಲ್‌, ನರೇಂದ್ರ ಮೋದಿಯವರ ನಾಯಕತ್ವದಡಿ ಭ್ರಷ್ಟಾಚಾರ ಮೇರೆ ಮೀರಿದೆ, ಆರ್ಥಿಕ ವೈಫಲ್ಯ, ಅಸಮರ್ಥತೆ ಹಾಗೂ ಸಮಾಜವನ್ನು ವಿಭಜಿಸುವ ಕೆಟ್ಟ ಧೋರಣೆ ವಿಜೃಂಭಿಸುತ್ತಿದೆ ಎಂದರು. ‘‘ಆಡಳಿತ ವ್ಯವಸ್ಥೆ ವಿರುದ್ಧ ಜನರ ಆಕ್ರೋಶ ಮಡುಗಟ್ಟತೊಡಗಿದೆ. ಇದನ್ನು ನಮ್ಮ ಪಕ್ಷದ ಸಂಸದರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳಿಗೆ ಸ್ಪಂದಿಸಿ ಪರ್ಯಾಯ ವ್ಯವಸ್ಥೆ ಉದಯಕ್ಕೆ ಅನುವು ಮಾಡಿಕೊಡಬೇಕು,’’ ಎಂದು ಕರೆ ನೀಡಿದರು. 

ಸ್ವಾತಂತ್ರ್ಯಾನಂತರದ 70 ವರ್ಷ ಈ ದೇಶ ಅಭಿವೃದ್ಧಿ ಪ್ರಯಾಣಿಕ ರೈಲಿನಂತೆ ಮಂದಗೊಂಡಿತ್ತು. ಇನ್ನು ಮುಂದೆ ಅಚ್ಛೇ ದಿನ್‌ ಗುರಿ ತಲುಪುವ ವೇಗದ ಮಾಂತ್ರಿಕ ರೈಲು ಆಗಿ ಪರಿವರ್ತನೆಗೊಳ್ಳಲಿದೆ ಎಂದು ಪ್ರಧಾನಿಯಾದ ಆರಂಭದಲ್ಲಿ ಮೋದಿ ಆಡಿದ್ದ ಮಾತುಗಳನ್ನು ರಾಹುಲ್‌ ನೆನಪಿಸಿದರು. 
ಹೆಣ್ಣುಮಕ್ಕಳ ರಕ್ಷಣೆ 
ಹೊಸದಿಲ್ಲಿಯಲ್ಲಿ ಮಂಗಳವಾರ ಪಕ್ಷದ ‘ಮಹಿಳಾ ಅಧಿಕಾರ ಸಮ್ಮೇಳನ’ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಬಿಜೆಪಿ ಶಾಸಕರಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಎಂದು ಗಂಭೀರ ಹೇಳಿಕೆ ನೀಡಿದ್ದಾರೆ. 

ದೇಶವನ್ನು ಕೇವಲ ಪುರುಷರು ಮಾತ್ರ ಆಳ್ವಿಕೆ ನಡೆಸಬೇಕು ಎಂಬುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಧೋರಣೆ. ಅವರು ಮಹಿಳೆಯರ ಬಗ್ಗೆ ಮಾತನಾಡುತ್ತಾರೆ, ಆದರೆ ಮಹಿಳಾ ಮೀಸಲು ವಿಧೇಯಕ ಮಾತ್ರ ಮೂಲೆಯಲ್ಲಿಟ್ಟಿದ್ದಾರೆ. ಸರ್ಕಾರ ವಿಧೇಯಕ ಮಂಡಿಸಿದರೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ ಪ್ರಧಾನ ಮಂತ್ರಿಗಳು ಏನನ್ನೂ ಹೇಳುತ್ತಿಲ್ಲ. ಬದಲಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಹುಸಿ ಘೋಷಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಳೆದ 70 ವರ್ಷಗಳಲ್ಲಿ ನಡೆಯದ ದೌರ್ಜನ್ಯ ಕೇವಲ 4 ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದಿವೆ ಎಂದು ಆಪಾದಿಸಿದರು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا