Urdu   /   English   /   Nawayathi

ಖಾನ್‌ಗೆ ಪ್ರಧಾನಿ ಪಟ್ಟ ಮತ್ತಷ್ಟು ತಡ

share with us

ಇಸ್ಲಾಮಾಬಾದ್‌: 08 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಚುನಾವಣೆಯಲ್ಲಿ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಜಯ ಸಾಧಿಸಿದ್ದ ಇಸ್ಲಾಮಾಬಾದ್‌ ಹಾಗೂ ಲಾಹೋರ್‌ ಕ್ಷೇತ್ರಗಳ 'ಚುನಾಯಿತ ಅಭ್ಯರ್ಥಿಯ ಘೋಷಣೆ'ಯನ್ನು ಪಾಕಿಸ್ಥಾನ ಚುನಾವಣಾ ಆಯೋಗ ತಡೆಹಿಡಿದಿದೆ. ಚುನಾವಣೆ ವೇಳೆ, ಖಾನ್‌ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಖಾನ್‌ ಅವರು, ಇಸ್ಲಾಮಾಬಾದ್‌, ಲಾಹೋರ್‌ ಸೇರಿದಂತೆ ಬನ್ನು, ಮಿಯಾನ್‌ ವಾಲಿ, ಕರಾಚಿ ಪೂರ್ವ ಕ್ಷೇತ್ರಗಳಲ್ಲೂ ನಿಂತು ಜಯ ಸಾಧಿಸಿದ್ದರು.

ಏತನ್ಮಧ್ಯೆ, ಈ ಹಿಂದೆ ಖೈಬರ್‌ ಪ್ರಾಂತ್ಯದಲ್ಲಿ ಆಡಳಿತಾಧಿಕಾರಿಯಾಗಿದ್ದಾಗ ಸರಕಾರಿ ಕಾಪ್ಟರ್‌ ಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡಿದ್ದ ಪ್ರಕರಣಕ್ಕಾಗಿ ಪಾಕಿಸ್ಥಾನ ಬಾಧ್ಯತಾ ಸಂಸ್ಥೆ, ಖಾನ್‌ ಅವರನ್ನು ವಿಚಾರಣೆಗೊಳಪಡಿಸಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا