Urdu   /   English   /   Nawayathi

Hothouse: ಇನ್ನು ಕೇವಲ 120 ವರ್ಷಗಳಲ್ಲಿ ಭೂಮಿಯಾಗುತ್ತಾ ಕೆಂಡದುಂಡೆ?

share with us

ಲಂಡನ್‌: 08 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ದಿನೇದಿನೆ ಏರುತ್ತಿರುವ ತಾಪಮಾನದಿಂದ ಭೂಮಿಯು ಶೀಘ್ರದಲ್ಲೇ 'ಹಾಟ್‌ಹೌಸ್‌' ಆಗಲಿದೆ ಎಂದು ಅಧ್ಯಯನವೊಂದು ಗಂಭೀರ ಎಚ್ಚರಿಕೆ ಕೊಟ್ಟಿದೆ. ಇದನ್ನು ಗ್ರೀನ್‌ಹೌಸ್‌ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ಭೂಮಿಯು ವಿಜ್ಞಾನಿಗಳು ಹೇಳುತ್ತಿರುವ ಹಾಟ್‌ಹೌಸ್‌/ಗ್ರೀನ್‌ಹೌಸ್‌ ಆದರೆ, ಮುಂದೆ ಜಾಗತಿಕ ತಾಪಮಾನ ಏರಿಕೆಯು 4 ರಿಂದ 5 ಡಿಗ್ರಿಗೆ ತಲುಪಲಿದೆ. ಸಮುದ್ರದ ಮಟ್ಟ ಇಂದಿಗಿಂತ 60 ಮೀಟರ್‌ ಹೆಚ್ಚಾಗಲಿದೆ. ಇದರರ್ಥ ಭೂಮಿಯು ಮನುಷ್ಯ, ಪ್ರಾಣಿ-ಪಕ್ಷಿಗಳು ವಾಸಿಸಲು ಯೋಗ್ಯವಲ್ಲದ ಗ್ರಹವಾಗಲಿದೆ! 

ಇನ್ನು ಜಾಗತಿಕ ತಾಪಮಾನ ಏರಿಕೆ ಕೇವಲ 1.5-2 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾದರೂ ಅಪಾಯದ ಅಂಗಳಕ್ಕೆ ಕಾಲಿಟ್ಟಂತೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. 

ಇಲ್ಲಿ ಮತ್ತಷ್ಟು ಯೋಚಿಸಬೇಕಾದ ವಿಚಾರ ಎಂದರೆ, ಜಾಗತಿಕ ತಾಪಮಾನ ಏರಿಕೆ 2 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾದ ನಂತರ ಹಸಿರುಮನೆ ಅನಿಲ ಬಿಡುಗಡೆ ಸಂಪೂರ್ಣವಾಗಿ ನಿಂತರೂ ಭೂಮಿ ಬಿಸಿಯಾಗುವಿಕೆ ನಿಲ್ಲುವುದಿಲ್ಲವಂತೆ. ಈ ಬಗ್ಗೆ ವಿವರಿಸಿರುವ ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯ ವಿಜ್ಞಾನಿ ವಿಲ್‌ ಸ್ಟೀಫನ್‌, ಮಾನವ ಪ್ರೇರಿತ ಜಾಗತಿಕ ತಾಪಮಾನ ಏರಿಕೆಯು 2 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾದರೆ ಭೂಮಿಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದು 'ಫೀಡ್‌ಬ್ಯಾಕ್‌' ಪ್ರಕ್ರಿಯೆಗೆ ಚಾಲನೆ ಸಿಕ್ಕಿದಂತೆ. ಅಂದರೆ ಭೂಮಿಯ ತಾಪಮಾನ ಇಳಿಕೆಯಾಗದೆ, ಹೆಚ್ಚಾಗುತ್ತಲೇ ಸಾಗುವುದು ಎಂದರ್ಥ. ಈ ಪ್ರಕ್ರಿಯೆಯು ನಾವು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೂ ಮತ್ತೆಂದೂ ಭೂಮಿ ತಂಪಾಗುವುದಿಲ್ಲ. 
ಪ್ಯಾರಿಸ್‌ ಒಪ್ಪಂದದಂತೆ ಕಾರ್ಬನ್‌ ಬಿಡುಗಡೆ ತಗ್ಗಿಸಿದರೂ ಭೂಮಿ 'ಹಾಟ್‌ಹೌಸ್‌' ಪ್ರವೇಶಿಸುವ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿದೆ. ಈ ದುರಂತವನ್ನು ತಪ್ಪಿಸಲು ಜಾಗತಿಕವಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಪ್ರಸ್ತುತ ಜಾಗತಿಕ ತಾಪಮಾನ ಏರಿಕೆ ಪ್ರಮಾಣ ಸರಾಸರಿ 0.9-1 ಡಿಗ್ರಿ ಸೆಲ್ಶಿಯಸ್‌ನಷ್ಟು ಇದೆ. ಪ್ರತೀ ಹತ್ತು ವರ್ಷಕ್ಕೆ 0.17 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ 60 ವರ್ಷಕ್ಕೆ ಜಾಗತಿಕ ತಾಪಮಾನ ಏರಿಕೆ 2 ಡಿಗ್ರಿ ಸೆಲ್ಶಿಯಸ್‌ ದಾಟಲಿದೆ. ಅಂದರೆ ವಿಜ್ಞಾನಿಗಳು ಎಚ್ಚರಿಸಿದ 'ಹಾಟ್‌ಹೌಸ್‌' ಪ್ರವೇಶಕ್ಕೆ ಬಾಕಿಯಿರುವುದು ಕೇವಲ 120 ವರ್ಷಗಳು ಮಾತ್ರ. 

ಮೊದಲೇ ವಿವರಿಸಿದಂತೆ ಭೂಮಿ ಫೀಡ್‌ಬ್ಯಾಕ್‌ ಪ್ರಕ್ರಿಯೆ ಆರಂಭಿಸಿದರೆ ಸಾಗರದ ದಡದಲ್ಲಿ ಮೀಥೇನ್‌ ಹೈಡ್ರೇಟ್ಸ್‌ ನಶಿಸುತ್ತದೆ. ನೆಲ ದುರ್ಬಲಗೊಳ್ಳುತ್ತದೆ. ಸಾಗರದಲ್ಲಿ ಬ್ಯಾಕ್ಟೀರಿಯಾಗಳ ಹಾವಳಿ ವಿಪರೀತಗೊಳ್ಳುತ್ತದೆ. ಅಮೇಜಾನ್‌ ಮಳೆಕಾಡುಗಳು ಹೇಳ ಹೆಸರಿಲ್ಲದಂತಾಗುತ್ತವೆ. ಆರ್ಕ್‌ಟಿಕ್‌, ಅಂಟಾರ್ಟಿಕಾ, ಪೋಲಾರ್‌ ಪ್ರದೇಶದ ಹಿಮಗಡ್ಡೆಗಳು ಕರಗಿ ಹೋಗುತ್ತವೆ. ಕ್ರಮೇಣ ಭೂಮಿಯು ವಾಸಿಸಲು ಯೋಗ್ಯವಲ್ಲದ ಗ್ರಹವಾಗಿ ಬದಲಾಗುತ್ತದೆ. 

ಪರಿಹಾರವೇನು? 
ಇಂಗಾಲದ ಡೈ ಆಕ್ಸೈಡ್‌ ಮತ್ತು ಹಸಿರು ಮನೆ ಅನಿಲಗಳ ಹೊರ ಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದರೆ ಸಾಕಾಗುವುದಿಲ್ಲ. ವಾಯು ಮಂಡಲದಿಂದ ಇಂಗಾಲದ ಡೈ ಆಕ್ಸೈಡ್‌ಅನ್ನು ತೆಗೆದು ಹಾಕಲು ಮತ್ತು ಭೂಮಿಯ ತಳದಲ್ಲೇ ನೆಲೆಸುವಂತೆ ಮಾಡಬೇಕು. ಇದಕ್ಕಾಗಿ ಅರಣ್ಯ, ಕೃಷಿ ಮತ್ತು ಮಣ್ಣಿನ ಗುಣಮಟ್ಟ ಹೆಚ್ಚಿಸಬೇಕು. ತಂತ್ರಜ್ಞಾನದ ಮೊರೆ ಹೋಗಬೇಕು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا