Urdu   /   English   /   Nawayathi

10 BJP ಶಾಸಕರನ್ನು ಕಾಂಗ್ರೆಸ್‌ಗೆ ತರುತ್ತೇನೆ! :ರಮೇಶ್‌ ಜಾರಕಿಹೊಳಿ

share with us

ಹೊಸದಿಲ್ಲಿ: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ) 'ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿಗೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಪೌರಾಡಳಿತ  ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು  ಯಡಿಯೂರಪ್ಪ ಅವರ ಜೊತೆ ದೆಹಲಿಗೆ ಬಂದಿಲ್ಲ. ನಮ್ಮ ಪಕ್ಷದ ವರಿಷ್ಠರ ಭೇಟಿಗಾಗಿ ಬಂದಿದ್ದೆ ಎಂದರು. ನನಗೆ ಬಿಜೆಪಿಯ 10 ಜನ ಶಾಸಕರನ್ನು ಕಾಂಗ್ರೆಸ್‌ಗೆ ಕರೆ ತರುವ ಶಕ್ತಿ ದೇವರು ಕೊಟ್ಟಿದ್ದಾನೆ. ಆ ಕೆಲಸ ಮಾಡುತ್ತೇನೆ ಎಂದು ಬಾಂಬ್‌ ಸಿಡಿಸಿದರು. 

ನಾನು ವರಿಷ್ಠರನ್ನು ಭೇಟಿಯಾಗಲು ಬಂದಿದ್ದು, ನಮ್ಮ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇನೆ. ಲೋಕ ಸಭಾ ಚುನಾವಣೆಯ ಕುರಿತೂ ಚರ್ಚೆ ನಡೆಸಿದ್ದೇವೆ ಎಂದರು. ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಎಂಟು ಶಾಸಕರು ಸೋಮವಾರ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಎಸ್ಟಿ ಸಮುದಾಯಕ್ಕೆ  ಮಂತ್ರಿ ಸ್ಥಾನ ಹಾಗೂ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಈ ಶಾಸಕರು ಆಗ್ರಹಿಸಿದ್ದಾರೆ.

ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಬಳ್ಳಾರಿ ಗ್ರಾಮಾಂತರದ ನಾಗೇಂದ್ರ, ಬಸವಕಲ್ಯಾಣದ ಬಿ. ನಾರಾಯಣರಾವ್‌, ಬೀದರ್‌ನ ರಹೀಂ ಖಾನ್‌, ಅಥಣಿಯ ಮಹೇಶ್‌, ಲಿಂಗಸಗೂರು ಶಾಸಕ ದುರ್ಗಪ್ಪ ಹೂಲಗೇರೆ ಹಾಗೂ ವಿಧಾನ ಪರಿಷತ್‌ ಸದಸ್ಯ ವಿವೇಕ್‌ ರಾವ್‌ ಪಾಟೀಲ್‌ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಕಲ್ಪಿಸುವಂತೆ ಹೈ ಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا