Urdu   /   English   /   Nawayathi

ಸಿಆರ್ ಪಿಎಫ್ ಯೋಧರ ಸಾವಿಗೆ ನಕ್ಸಲರಲ್ಲದೆ ಈ ಕಾರಣಗಳೂ ಇದೆ!

share with us

ನವದೆಹಲಿ: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ)ನಕ್ಸಲ್-ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಆರ್ ಪಿಎಫ್ ಸೈನಿಕರು ನಕ್ಸಲರ ಗುಂಡಿಗೆ ಬಲಿಯಾಗಿ ಸಾವನ್ನಪ್ಪುವದಕ್ಕಿಂತ ಬೇರೆಯ ಸಮಸ್ಯಾತ್ಮಕ ಕಾರಣಗಳಿಗೆ ಸಾವನ್ನಪ್ಪುತ್ತಿದ್ದಾರೆ. ಈ ರೀತಿ ಸಾಯುವವರ ಸಂಖ್ಯೆ ನಕ್ಸಲ್ ಕಾರ್ಯಾಚರಣೆ ವೇಳೆ ಸಾಯುವವರ ಸಂಖ್ಯೆಗಿಂತ ಹದಿನೈದು ಪಟ್ಟು ಹೆಚ್ಚಾಗಿದೆ! ಕಳೆದ ಎರಡು ವರ್ಷಗಳಲ್ಲಿ ನಕ್ಸಲ್-ವಿರೋಧಿ ಕಾರ್ಯಾಚರಣೆಗಿಂತ 15 ಪಟ್ಟು ಹೆಚ್ಚು ಸೈನಿಕರು ಹೃದಯಾಘಾತ, ಖಿನ್ನತೆ ಮತ್ತು ಆತ್ಮಹತ್ಯೆಗಳ ಕಾರಣಕ್ಕಾಗಿ ಸಾವನ್ನಪುತ್ತಿದ್ದಾರೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಗೃಹ ಇಲಾಖೆ ರಾಜ್ಯ ಸಚಿವರಾದ ಹನ್ಸರಾಜ್ ಜಿ. ಅಹಿರ್ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. 2016 ರಿಂದ ಈ ವರ್ಷ ಜುಲೈ ವರೆಗೆ  ಒಟ್ಟು 1,294 ಸೈನಿಕರು ಸಾವನ್ನಪ್ಪಿದ್ದಾರೆ . ಇದರಲ್ಲಿ ಬಿಹಾರ, ಛತ್ತೀಸ್ ಘರ್, ಮಹಾರಾಷ್ಟ್ರ ಸೇರಿ ಎಡಪಂಥೀಯ ತೀವ್ರವಾದಿಗಳು ಪ್ರಬಲರಾಗಿರುವ ರಾಜ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸತ್ತ ಸೈನಿಕರ ಸಂಖ್ಯೆ 85. 

ದಾಖಲೆಗಳ ಪ್ರಕಾರ ಕಳೆದ ವರ್ಷ 156 ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ ಪಿಎಫ್೦ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಮಲೇರಿಯಾ ಮತ್ತು ಡೆಂಗ್ಯೂ ಕಾರಣದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ, ಖಿನ್ನತೆ ಮತ್ತು ಆತ್ಮಹತ್ಯಾ ಕಾರಣದಿಂದಾಗಿ 38 ಮಂದಿ ಸಾವನ್ನಪ್ಪಿದ್ದರೆ ನಕ್ಸಲ್ ಕಾರ್ಯಾಚರಣೆ ಅಥವ ಇನ್ನಿತರೆ ಕಾರ್ಯಾಚರಣೆಗಳಿಲ್ಲದೆ ಇತರೆ ಕಾರಣಗಳಿಂದ  435 ಜನರು ಮೃತಪಟ್ಟಿದ್ದಾರೆ.

ಇದೇ ರೀತಿ  2016 ರ ಅಂಕಿ-ಅಂಶಗಳು ಹೇಳುವ ಪ್ರಕಾರ ಹೃದಯಾಘಾತದಿಂದಾಗಿ 92 ಮಂದಿ ಸಾವನ್ನಪ್ಪಿದ್ದರೆ ಡೆಂಗ್ಯೂ ಅಥವಾ ಮಲೇರಿಯಾದಿಂದಾಗಿ ಐದು ಜನರು, ಖಿನ್ನತೆ ಮತ್ತು ಆತ್ಮಹತ್ಯೆಗಳ ಕಾರಣಕ್ಕೆ 26 ಜನ, ಸೈನಿಕರು, 353 ಸೈನಿಕರು ಇತರ ಕಾರಣಗಳಿಂದಾಗಿ ತಮ್ಮಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷದ ಜುಲೈ ವರೆಗೆ 39 ಸೈನಿಕರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.ಐವರು ಡೆಂಗ್ಯೂ, ಮಲೇರಿಯಾಗಳಿಗೆ ಬಲಿಯಾದರೆ 19 ಮಂದಿ ಖಿನ್ನತೆಯಿಂದ ಜೀವ ಕಳೆದುಕೊಂಡಿದ್ದಾರೆ. ಇನ್ನೂ 124 ಮಂದುಇ ಇತರೆ ಕಾರಣಕ್ಕಾಗಿ ಬ್ಲಿಯಾಗಿದಾರೆ ಎಂದು ಮಾಹಿತಿ ದೊರಕಿದೆ.. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا