Urdu   /   English   /   Nawayathi

ರಾಜ್ಯದಲ್ಲಿದ್ದಾರೆ ಸಿಎಂ, ಸೂಪರ್ ಸಿಎಂ, ಸುಪ್ರೀಂ ಸಿಎಂ: ಬಿಜೆಪಿ ಟೀಕೆ

share with us

ಬೆಂಗಳೂರು: 06 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರರಚನೆಯಾಗಿದ್ದು, ಎಚ್‌.ಡಿ ಕುಮಾರಸ್ವಾಮಿಮುಖ್ಯಮಂತ್ರಿಯಾಗಿದ್ದರೂ, ನಿಜವಾಗಿ ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. 

ಬಿಜೆಪಿ ಕರ್ನಾಟಕ ಮಾಡಿರುವ ಟ್ವೀಟ್‌ನ ಪ್ರಕಾರ, ರಾಜ್ಯದಲ್ಲಿಮೂವರು ಮುಖ್ಯಮಂತ್ರಿಗಳಿದ್ದಾರೆ. ಅವರಲ್ಲಿ ಎಚ್‌ಡಿ ಕುಮಾರಸ್ವಾಮಿ ದುರ್ಬಲ ಸಿಎಂ ಆಗಿದ್ದಾರೆ. ಎಚ್‌ಡಿ ರೇವಣ್ಣ ಸೂಪರ್ ಸಿಎಂ ಮತ್ತು ಎಚ್‌ಡಿ ದೇವೇಗೌಡ ಸುಪ್ರೀಂ ಸಿಎಂ ಆಗಿದ್ದಾರೆ. 

BJP Karnataka✔@BJP4Karnataka

The state of Karnataka apparently has 3 CM
HD Kumaraswamy the crippled CM
HD Revanna the super CM
HD Deve Gowda the supreme CM

With so many CM’s the state is still waiting for a govt that can function. We think Deve Gowda’s family should first decide who really is the CM.

10:15 AM - Aug 6, 2018

ಒಂದೇ ರಾಜ್ಯದಲ್ಲಿ ಹಲವು ಮಂದಿ ಸಿಎಂ ಆಗಿರುವುದು ಕರ್ನಾಟಕದಲ್ಲಿ. ಇಷ್ಟೆಲ್ಲ ಸಿಎಂ ಇದ್ದರೂ ರಾಜ್ಯದಲ್ಲಿ ಸರಕಾರ ಮಾತ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ. ದೇವೇಗೌಡರ ಕುಟುಂಬ ರಾಜ್ಯದಲ್ಲಿ ನಿಜವಾದ ಸಿಎಂ ಯಾರು ಎನ್ನುವುದನ್ನು ಮೊದಲು ನಿರ್ಧರಿಸಬೇಕು ಎಂದು ಟ್ವೀಟ್‌ ಹೇಳಿದೆ. 
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ, ಸರಕಾರ ರಚನೆಗೆ ಅಗತ್ಯ ಸ್ಥಾನ ಪಡೆದಿರಲಿಲ್ಲ. ಹೀಗಾಗಿ ನಂತರ ಜೆಡಿಎಸ್‌ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿದ್ದವು. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا