Urdu   /   English   /   Nawayathi

ಭಾರತದ ಬೇಡಿಕೆ ತಿರಸ್ಕೃತ

share with us

ಲಂಡನ್‌: 06 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಇಂಗ್ಲೆಂಡ್‌ನ‌ಲ್ಲಿ 12ರಂದು ನಡೆಸಲು ನಿರ್ಧರಿಸಲಾಗಿರುವ ಖಲಿಸ್ತಾನ ಹೋರಾಟಗಾರರ ಸಭೆಯನ್ನು ನಿಷೇಧಿಸಬೇಕು ಎಂಬ ಭಾರತದ ಬೇಡಿಕೆಯನ್ನು ಇಂಗ್ಲೆಂಡ್‌ನ‌ ಥೆರೇಸಾ ಮೇ ಸರಕಾರ ನಿರಾಕರಿಸಿದೆ. ಕಾನೂನು ಪರಿಮಿತಿಯಲ್ಲಿ ಪ್ರತಿಭಟನೆ ನಡೆಸಲು ಅವರು ಹಕ್ಕು ಹೊಂದಿದ್ದಾರೆ ಎಂದು ಥೆರೇಸಾ ಸರಕಾರ ಹೇಳಿದೆ.

ಇಂಗ್ಲೆಂಡ್‌ನ‌ ಟ್ರಫಾಲ್ಗರ್‌ ಸ್ಕ್ವೇರ್‌ನಲ್ಲಿ ಅಮೆರಿಕ ಮೂಲದ ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆ ಸಭೆ ನಡೆಸಲು ನಿರ್ಧರಿಸಿದ್ದು, ಈ ವೇಳೆ ಪಂಜಾಬ್‌ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ನಿಲುವಳಿ ಮಂಡಿಸುವ ಸಾಧ್ಯತೆಯಿದೆ. ಸಿಖ್‌ ಪ್ರತ್ಯೇಕತಾವಾದಿ ಮುಖಂಡರನ್ನು ಲಂಡನ್‌ ಹತ್ತಿಕ್ಕಬೇಕು ಎಂದು ಹಿಂದಿನಿಂದಲೂ ಭಾರತ ಆಗ್ರಹಿಸುತ್ತಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا