Urdu   /   English   /   Nawayathi

ಮಹಿಳೆಯರ ರಕ್ಷಣೆಗೆ ನಾವೆಲ್ಲರೂ ಬದ್ಧ : ರಾಹುಲ್

share with us

ನವದೆಹಲಿ: 05 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಬಿಹಾರದ ಮುಜಾಫರ್‍ಪುರ್ ಸೇರಿದಂತೆ ಹಲವು ವಸತಿನಿಲಯಗಳಲ್ಲಿ ಅಪ್ರಾಪ್ತರೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಪ್ರಕರಣಗಳನ್ನು ಖಂಡಿಸಿ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ಇದರೊಂದಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳ(ಜೆಡಿಯು) ಜೊತೆಗಿನ ಮೈತ್ರಿ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ.

ನಿನ್ನೆ ರಾಜಧಾನಿಯ ಜಂತರ್‍ಮಂತರ್‍ನಲ್ಲಿ ರಾಷ್ಟ್ರೀಯ ಜನತಾ ದಳ(ಆರ್‍ಜೆಡಿ) ಮುಖಂಡ ತೇಜಸ್ವಿ ಯಾದವ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ವಿರೋಧಪಕ್ಷಗಳ ಮುಖಂಡರು ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿನ ಮಹಿಳೆಯರ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರ ರಕ್ಷಣೆಗಾಗಿಯೇ ನಾವೆಲ್ಲ ಇಲ್ಲಿ ಒಗ್ಗೂಡಿದ್ದೇವೆ. ನಿತಿಶ್ ಕುಮಾರ್ ಅವರಿಗೆ ಅವರ ರಾಜ್ಯದಲ್ಲಿ ನಡೆದಿರುವ ಇಂಥ ನೀಚ ಘಟನೆಗಳ ಬಗ್ಗೆ ನಿಜಕ್ಕೂ ನಾಚಿಕೆಯಾಗಿದ್ದರೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜ್ಯಸಭೆ ಮಾಜಿ ಸದಸ್ಯ ಶರದ್ ಯಾದವ್, ಎಡ ಪಕ್ಷದ ನಾಯಕರೂ ಸೇರಿದಂತೆ ಹಲವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا