Urdu   /   English   /   Nawayathi

ಆಫ್ಘನ್ ಮಸೀದಿ ಮೇಲೆ ಮಾನವ ಬಾಂಬ್ ದಾಳಿ : ಸತ್ತವರ ಸಂಖ್ಯೆ 78ಕ್ಕೇರಿಕೆ

share with us

ಕಾಬೂಲ್: 05 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಆಫ್ಘಾನಿಸ್ತಾನದಲ್ಲಿ ತಾಲಿಬಾಲ್ ಉಗ್ರರ ಅಟ್ಟಹಾಸ ಮುಂದುವರಿದೆ. ಶಿಯಾ ಸಮುದಾಯದ ಮಸೀದಿ ಮೇಲೆ ನಡೆದ ಎರಡು ಪ್ರತ್ಯೇಕ ಮಾನವ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 78ಕ್ಕೇರಿದೆ. ಈ ವಿಧ್ವಂಸಕ ಕೃತ್ಯದಲ್ಲಿ ಅನೇಕರು ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ ಈವರೆಗೆ 78 ಮಂದಿ ಹತರಾಗಿದ್ದಾರೆ ಎಂದು ಉನ್ನತ ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕ್ಷಿಯಾದ ಗಾರ್ಡೆಜ್ ಪಟ್ಟಣದಲ್ಲಿರುವ ಮಸೀದಿಗೆ ಇಬ್ಬರು ಮಾನವ ಬಾಂಬರ್‍ಗಳು ಬುರ್ಕಾ ಧರಿಸಿ ನುಗ್ಗಿದರು. ನಂತರ ನಡೆದ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು, 80 ಮಂದಿ ಗಂಭೀರ ಗಾಯಗೊಂಡರು ಎಂದು ಪೊಲೀಸ್ ಮುಖ್ಯಸ್ಥ ರಾಝ್ ಮಹಮದ್ ತಿಳಿಸಿದ್ದಾರೆ. ಇದೇ ವೇಳೆ ಖಾಜ್ವಾ ಹಸನ್ ಮಸೀದಿಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 36ಕ್ಕೂ ಅಧಿಕ ಶಿಯಾ ಮುಸ್ಲಿಮರು ಹತರಾದರು.  ಗಾಯಗೊಂಡ 20ಕ್ಕೂ ಹೆಚ್ಚು ಮಕ್ಕಳು ಮತ್ತು ಇತರ 40 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا