Urdu   /   English   /   Nawayathi

ಅಜ್ಜಿ ಮನೆಯಲ್ಲಿ ನಾಲ್ವರು ಮಾವಂದಿರಿಂದ ಯುವತಿ ಮೇಲೆ ಅತ್ಯಾಚಾರ

share with us

ಅಹಮದಾಬಾದ್‌: 04 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶಾಹ್‌ಪುರದ ಅಜ್ಜಿ ಮನೆಯಲ್ಲಿ ನಾಲ್ವರು ಸೋದರ ಮಾವಂದಿರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಯುವತಿಯೊಬ್ಬರು ದೂರು ನೀಡಿದ್ದಾರೆ. ಅಜ್ಜಿ ಜತೆ ಮನೆಯಲ್ಲಿ ಮಲಗಿದ್ದಾಗ ನಾಲ್ವರು ಬಂದು ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಕೈ ಮತ್ತು ಕಾಲು ಕೈ ಹಿಡಿದುಕೊಂಡಿದ್ದು, ಇಬ್ಬರು ರೇಪ್‌ ಮಾಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯ ಜತೆ ಆರೋಪಿಗಳಿಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪವಿತ್ತು. ಮಹಿಳೆಯ ತಂದೆ ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಮರು ಮದುವೆಯಾಗಿದ್ದಾರೆ. ಹೀಗಾಗಿ ಮಹಿಳೆ ಮತ್ತು ಒಡ ಹುಟ್ಟಿದವರಿಬ್ಬರು ಅಜ್ಜಿಯ ಜತೆ ವಾಸವಿದ್ದರು. ಈ ಮೂವರು ಮಕ್ಕಳು ತಮ್ಮ ಮನೆಯಲ್ಲೇ ಇದ್ದರೆ ಆಸ್ತಿಯು ಕೈತಪ್ಪುತ್ತದೆ ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ನಡೆಸಿದ್ದಾರೆ. 

ಮೇ 31ರ ರಾತ್ರಿ ಕೂಡ ಒಬ್ಬ ಮಾವನ ಜತೆ ಯುವತಿಗೆ ಆಸ್ತಿ ವಿಚಾರದಲ್ಲೇ ಜಗಳವಾಗಿತ್ತು. ಮುಂಜಾನೆಯ ವೇಳೆಗೆ ಮತ್ತೆ ಮೂವರೊಂದಿಗೆ ಬಂದು ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರಿನಲ್ಲಿ ವಿವರಿಸಿದ್ದಾರೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا