Urdu   /   English   /   Nawayathi

WWE ಕೇನ್ ಖ್ಯಾತಿಯ ಗ್ಲೆನ್ ಜೇಕಬ್ಸ್ ಈಗ ಟೆನ್ನಿಸ್ಸೀ ಮೇಯರ್!

share with us

ವಾಷಿಂಗ್ಟನ್​: 04 ಆಗಸ್ಟ್ (ಫಿಕ್ರೋಖಬರ್ ಸುದ್ದಿ) WWE ಸೂಪರ್ ಸ್ಟಾರ್ ಕೇನ್ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಸ್ಪರ್ಧಿ ಗ್ಲೆನ್ ಜೇಕಬ್ಸ್ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಾಜಿ ವರ್ಲ್ಡ್​ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಚಾಂಪಿಯನ್​ ಕೇನ್​ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನಾಕ್ಸ್ ಕೌಂಟಿಯ ಮೇಯರ್​ ಆಗಿ ಆಯ್ಕೆಯಾಗಿದ್ದಾರೆ. WWEನಲ್ಲಿ ಕೇನ್​ ಎಂದೇ ಜಪ್ರಿಯರಾಗಿರುವ 51 ವರ್ಷದ ಗ್ಲೇನ್​ ಜೇಕಬ್ಸ್​ ಅವರು ರಿಪಬ್ಲಿಕನ್​ ಪಕ್ಷದಿಂದ ಸ್ಪರ್ಧಿಸಿದ್ದರು. ಡೆಮಾಕ್ರೆಟಿಕ್​ ಪಕ್ಷದ ಲಿಂಡಾ ಹನ್ನೆ ಅವರ ವಿರುದ್ಧ 2-1 ಅಂತರದಿಂದ ಜಯಗಳಿಸಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಗ್ಲೇನ್​ ಜೇಕಬ್ಸ್​ ಸೆಪ್ಟೆಂಬರ್​ 1 ರಂದು ನೂತನ ಮೇಯರ್​ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا