Urdu   /   English   /   Nawayathi

ಪಾಕ್’ಗೆ ಮತ್ತೊಂದು ಬಲವಾದ ಹೊಡೆತ ಕೊಟ್ಟ ಅಮೇರಿಕ..!

share with us

ವಾಷಿಂಗ್ಟನ್: 02 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಯೋತ್ಪಾದಕರನ್ನು ನಿಗ್ರಹಿಸಲು ಹಿಂದೇಟು ಹಾಕುತ್ತಿರುವ ಪಾಕಿಸ್ತಾನಕ್ಕೆ ಅಮರಿಕೆ ಇಂದು ಮತ್ತೊಂದು ಬಲವಾದ ಹೊಡೆತ ನೀಡಿದೆ. ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆ-2019(ಎನ್‍ಡಿಎಎ-19)ಕ್ಕೆ ಅಮೆರಿಕ ಅನುಮೋದನೆ ನೀಡಿದ್ದು, ಪಾಕಿಸ್ತಾನಕ್ಕೆ ನೀಡುತ್ತಿದ್ದ ರಕ್ಷಣಾ ನೆರವನ್ನು 150 ದಶಲಕ್ಷ ಡಾಲರ್‍ಗಳಿಗೆ ಸೀಮಿತಗೊಳಿಸಿದೆ. ಪ್ರತಿ ವರ್ಷ ಪಾಕ್‍ಗೆ 750 ದಶಲಕ್ಷ ಡಾಲರ್ ಹಣ ಲಭಿಸುತ್ತಿತ್ತು.  ಪ್ರತಿ ಬಾರಿ ಹಕ್ಕಾನಿ ಉಗ್ರರು, ತಾಲಿಬಾನ್ ಬಂಡುಕೋರರೂ ಸೇರಿದಂತೆ ಭಯೋತ್ಪಾದನೆ ಸಂಘಟನೆಗಳು ಹಾಗೂ ಉಗ್ರಗಾಮಿಗಳ ದಮನಕ್ಕೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭರಪೂರ ಹಣ ನೀಡುತ್ತಿದ್ದ ಅಮೆರಿಕ ಕಾಂಗ್ರೆಸ್ ಈ ಬಾರಿ ಭದ್ರತಾ ನೆರವಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಿದೆ.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا