Urdu   /   English   /   Nawayathi

ಲಂಕಾಗೆ ಕಳ್ಳಸಾಗಣೆಯಾಗುತ್ತಿದ್ದ 5,600 ಜಿಲೆಟಿನ್ ಕಡ್ಡಿಗಳ ವಶ, 6 ಮಂದಿ ಅರೆಸ್ಟ್

share with us

ರಾಮೇಶ್ವರಂ: 01 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ದ್ವೀಪರಾಷ್ಟ್ರ ಶ್ರೀಲಂಕಾಗೆ ಕಳ್ಳಸಾಗಣೆಯಾಗುತ್ತಿದ್ದ 5,600 ಜಿಲೆಟಿನ್ ಕಡ್ಡಿಗಳು ಹಾಗೂ ಇತರ ಸ್ಫೋಟಕಗಳನ್ನು ತಮಿಳುನಾಡಿನ ರಾಮೇಶ್ವರಂ ಬಳಿ ಸೆರನ್‍ಕೊಟೈ ಕರಾವಳಿ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಈ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ. ಖಚಿತ ಸುಳಿವಿನ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಜಿಲೆಟಿನ್ ಕಡ್ಡಿಗಳು ಮತ್ತು ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿತು. ರಾಮನಾಥಪುರಂ ಜಿಲ್ಲೆಯ ಬಂಧಿತ ಆರು ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾಗೆ ತಮಿಳುನಾಡಿನಿಂದ ಅದರಲ್ಲೂ ವಿಶೇಷವಾಗಿ ರಾಮೇಶ್ವರಂ ಮಾರ್ಗವಾಗಿ ಸ್ಫೋಟಕ ಸಾಮಗ್ರಿಗಳ ಕಳ್ಳಸಾಗಣೆ ಹೆಚ್ಚಾಗುತ್ತಿದೆ. ಇದು ದ್ವೀಪರಾಷ್ಟ್ರ ಸರ್ಕಾರ ವಿರುದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ(ಎಲ್‍ಟಿಟಿಇ) ತನ್ನ ಹೋರಾಟವನ್ನು ಸಕ್ರಿಯಗೊಳಿಸುತ್ತಿರುವ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಶ್ರೀಲಂಕಾಗೆ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಎಲ್‍ಟಿಟಿಇ ಚಟುವಟಿಕೆಗಳ ತೀವ್ರಗೊಳ್ಳುತ್ತಿರುವ ಸಾಧ್ಯತೆ ಇದೆ ಎಂಬ ಬಗ್ಗೆಯೂ ಗುಪ್ತಚರ ಇಲಾಖೆ ಗುಮಾನಿ ವ್ಯಕ್ತಪಡಿಸಿದೆ. ಜೂನ್ 25ರಂದು ಇದೇ ಜಿಲ್ಲೆಯ ತಂಗಚ್ಚಿಮಡಂ ಪ್ರದೇಶದಲ್ಲಿ ಪರಿತ್ಯಕ್ತ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿಂದ 50 ಪೆಟ್ಟಿಗೆಗಳು, 41 ಹಗುರ ಮೆಷಿನ್ ಗನ್‍ಗಳು, 22 ಮೆಷಿನ್ ಗನ್‍ಗಳು ಹಾಗೂ ಕೆಲವು ನೆಲಬಾಂಬ್‍ಗಳು ಪತ್ತೆಯಾಗಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا