Urdu   /   English   /   Nawayathi

ಅಪ್ರಾಪ್ತೆ ಮೇಲೆ ರೇಪ್, ಬ್ಲಾಕ್‍ಮೇಲ್ ಪ್ರಕರಣ : ಡಿಎಸ್ಪಿ, ಇನ್ಸ್ಪೆಕ್ಟರ್ ಸೇರಿ ಮೂವರು ಬಂಧನ

share with us

ಜೆಮ್‍ಶೆಡ್‍ಪುರ್/ರಾಂಚಿ: 01 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ಸ್‍ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್‍ಮೇಲ್ ಮಾಡಿದ್ದಾರೆನ್ನಲಾದ ಘಟನೆ ಜಾರ್ಖಂಡ್‍ನ ಜೆಮ್‍ಶೆಡ್‍ಪುರ್‍ನಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಮೂವರು ಪೊಲೀಸರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಘುಬೀರ್ ದಾಸ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.  ಮುಖ್ಯಮಂತ್ರಿಯವರ ಜನತಾ ಸಂದರ್ಶನ ಕಾರ್ಯಕ್ರಮವಾದ ಸಿಧಿ ಬಾತ್ (ನೇರ ಮಾತು) ವೇಳೆ ಜೆಮ್‍ಶೆಡ್‍ಪುರ್ ಅಪ್ರಾಪ್ತೆಯೊಬ್ಬಳು ರಘುಬೀರ್ ದಾಸ್ ಅವರ ಬಳಿ ಈ ಕೃತ್ಯದ ಬಗ್ಗೆ ಆರೋಪಿಸಿದ್ದಳು.  ಎಂಜಿಎಂ ಪೊಲೀಸ್ ಠಾಣೆಯ ಉಪ ಪೊಲೀಸ್ ವರಿಷ್ಠಾಧಿಕಾರಿ, ಠಾಣಾಧಿಕಾರಿ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಈ ಕೃತ್ಯದ ವೀಡಿಯೋ ಚಿತ್ರೀಕರಣ ಮಾಡಿ ನನಗೆ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ಬಾಲಕಿ ಮುಖ್ಯಮಂತ್ರಿ ಬಳಿ ದೂರಿದಳು.  ಈ ಘಟನೆ ಬಗ್ಗೆ ಕುಪಿತಗೊಂಡ ಮುಖ್ಯಮಂತ್ರಿ ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಸಿಐಡಿ ತನಿಖೆಗೆ ಆದೇಶಿಸಿದರು.

ಎಂಜಿಎಂ ಠಾಣೆಯ ಡಿವೈಎಸ್ಪಿ, ಠಾಣ ಉಸ್ತುವಾರಿ ಅಧಿಕಾರಿ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಜೆಮ್‍ಶೆಡ್‍ಪುರ್ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಬಿರ್ಥರಾಯ್, ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا