Urdu   /   English   /   Nawayathi

ಎನ್ಆರ್‏ಸಿ ವರದಿಗೂ, ಬಾಂಗ್ಲಾ ವಲಸಿಗರಿಗೂ ಸಂಬಂಧವಿಲ್ಲ: ಬಾಂಗ್ಲಾದೇಶ ಸ್ಪಷ್ಟನೆ

share with us

ಢಾಕಾ: 01 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‏ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ. ಅಕ್ರಮ ವಲಸಿಗರ ಸಮಸ್ಯೆಒಂದಿಗೆ ಈ ಪೌರತ್ವ ನೊಂದಣಿ ವರದಿಯನ್ನು ತಳುಕು ಹಾಕುವುದು ಸರಿಯಲ್ಲ ಎಂದಿದೆ. ಢಾಕಾದಿಂದ ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾಂಗ್ಲಾದೇಶ  ಮಾಹಿತಿ ಮತ್ತು ಪ್ರಸಾರ ಸಚಿವ ಹಸನುಲ್ ಹಕ್ ಇನು "ಅಸ್ಸಾಂನ ರಾಜ್ಯದಲ್ಲಿ ಶತಮಾನದಷ್ಟು ಹಳೆಯ ಜನಾಂಗೀಯ ಸಂಘರ್ಷ ಇರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ.ಳೆದ 48 ವರ್ಷಗಳಲ್ಲಿ ಯಾವುದೇ ಭಾರತೀಯ ಸರ್ಕಾರವು ಸಹ ಬಾಂಗ್ಲಾದೇಶದೊಡನೆ ಈ ಅಕ್ರಮ ವಲಸಿಗರ ಕುರಿತ ಸಮಸ್ಯೆಯನ್ನು ಮುನ್ನೆಲೆಗೆ ತಂದಿಲ್ಲ. ದೆಹಲಿಯ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ನ್ಯಾಯೋಚಿತವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.ಹೀಗಾಗಿ ಇದಕ್ಕೂ ಬಾಂಗ್ಲಾದೇಶಕ್ಕೂ ಯಾವ ಸಂಬಂಧವಿಲ್ಲ" ಎಂದಿದ್ದಾರೆ.

ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಹಿಂದಕೆ ಕರೆಸಿಕೊಳ್ಳುವಿರೆ ಎಂದು ಕೇಳಿದಾಗ ಇನು "ಭಾರತ ಇದುವರೆಗೆ ನಮ್ಮೊಂದಿಗೆ ಎನ್ಆರ್‏ಸಿ ವರದಿಯನ್ನು ಹಂಚಿಕೊಂಡಿಲ್ಲ. ಹಗೆಯೇ ಸಮಸ್ಯೆಯನ್ನು ಕುರಿತು ಚರ್ಚಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಾಗೆ ಚರ್ಚೆಗೆ ಆಹ್ವಾನಿಸುವವರೆಗೆ ನಾನು ಅದರ ಕುರಿತು ಮಾತನಾಡಲಾರೆ " ಎಂದಿದ್ದಾರೆ.

ಬಂಗಾಳಿ ಮಾತನಾಡುವ ಪ್ರತಿಯೊಬ್ಬರೂ ಬಾಂಗ್ಲಾದೇಶದೊಂದಿಗೆ ಸಂಪರ್ಕಿಸಬಾರದು ಎಂದು ಅವರು ಹೇಳಿದ್ದಾರೆ.

ಅಸ್ಸಾಂನ ಎನ್ಆರ್‏ಸಿ ಅಂತಿಮ ಕರಡು ಸೋಮವಾರ ಪ್ರಕಟವಾದಂದಿನಿಂದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಕರಡಿನಲ್ಲಿ 3.29 ಕೋಟಿ ಅರ್ಜಿದಾರರಲ್ಲಿ ಸುಮಾರು 2.89 ಕೋಟಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಜನರ ಹೆಸರು ಪ್ಟ್ಟಿಯಲ್ಲಿಲ್ಲದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا