Urdu   /   English   /   Nawayathi

ತೆಲಂಗಾಣ : ವೇಶ್ಯಾಗೃಹದಿಂದ 11 ಮಂದಿ ಬಾಲಕಿಯರು ಪಾರು

share with us

ಹೈದರಾಬಾದ್‌: 31 ಜುಲೈ (ಫಿಕ್ರೋಖಬರ್ ಸುದ್ದಿ) ತೆಲಂಗಾಣದ ಯದಾದ್ರಿ ಭೋಂಗೀರ್‌ ಜಿಲ್ಲೆಯ ಯಾದಗೀರಗುಟ್ಟ ಎಂಬಲ್ಲಿನ ವೇಶ್ಯಾಗೃಹವೊಂದರಿಂದ 11 ಮಂದಿ ಬಾಲಕಿಯನ್ನು  ಪಾರು ಮಾಡಲಾಗಿದೆ. ಇದೇ ವೇಳೆ ಎಂಟು ಮಂದಿ ಮಾನವ ಕಳ್ಳಸಾಗಣೆಗಾರರು ಮತ್ತು ಆರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಸೇವಾಭಿವೃದ್ಧಿಯ ಐಸಿಡಿಎಸ್‌ ಘಟಕದ ಅಧಿಕಾರಿಗಳು ಮತ್ತು ಪೊಲೀಸರು ತಂಡ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 7ರಿಂದ 10 ವರ್ಷ ಪ್ರಾಯದ 11 ಮಂದಿ ಬಾಲಕಿಯರನ್ನು ವೇಶ್ಯಾಗೃಹದಿಂದ ಪಾರುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಡ ಕುಟುಂಬಗಳ ಬಾಲಕಿಯರ ಮನೆಯವರಿಗೆ 1ರಿಂದ 2 ಲಕ್ಷ ರೂ. ತೆತ್ತು ಏಜಂಟರುಗಳ ಮೂಲಕ ಅವರನ್ನು ಇಲ್ಲಿಗೆ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا