Urdu   /   English   /   Nawayathi

ಹಸ್ತಾಂತರ ಪ್ರಕರಣ: ವಿಜಯ್ ಮಲ್ಯಗೆ ಜಾಮೀನು, ಸೆಪ್ಟೆಂಬರ್ 12ಕ್ಕೆ ವಿಚಾರಣೆ ಮುಂದೂಡಿಕೆ

share with us

ಲಂಡನ್: 31 ಜುಲೈ (ಫಿಕ್ರೋಖಬರ್ ಸುದ್ದಿ) ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಜಾಮೀನು ಕುರಿತು  ಅಂತಿಮ  ವಿಚಾರಣೆ ಇಂದು ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ನಡೆಯಿತು. ಹೈ ಪ್ರೋಪೈಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12 ಕ್ಕೆ ಮುಂದೂಡಿದೆ. ಹಸ್ತಾಂತರ ವಾರೆಂಟ್ ನಲ್ಲಿ ಬಂಧನಕ್ಕೊಳಗಾದ ನಂತರ  ಜಾಮೀನು ಪಡೆದು  ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ 62 ವರ್ಷದ ಮಾಜಿ ಕಿಂಗ್ ಪಿಷರ್ ಏರ್ ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಲಂಡನ್ ನಲ್ಲಿಯೇ ನೆಲೆಸಿದ್ದು, 9 ಸಾವಿರ ಕೋಟಿ ರೂಪಾಯಿಗಳ  ಹಣ ವರ್ಗಾವಣೆ ಹಾಗೂ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಮಗ ಸಿದ್ಧಾರ್ಥ್ ಜೊತೆಗೆ ಆಗಮಿಸಿದ ವಿಜಯ್ ಮಲ್ಯ, ತನ್ನ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮಾಡುತ್ತಿರುವ ಆರೋಪಗಳು ಸುಳ್ಳು, ಇಂದು ನ್ಯಾಯಾಲಯ  ತೀರ್ಮಾನಿಸಲಿದೆ ಎಂದು ಹೇಳಿದರು.

ಏಪ್ರಿಲ್ 27 ರಂದು ನಡೆದ ಸಂದರ್ಭದಲ್ಲಿ ಸಂಬಂಧಿತ ದಾಖಲಾತಿಗಳನ್ನು ನೀಡುವಂತೆ ನ್ಯಾಯಾಧೀಶ ಅರ್ಬುತ್ ನಾಟ್ ಸಿಬಿಐ ಗೆ ಸೂಚಿಸಿದ್ದ  ಹಿನ್ನೆಲೆಯಲ್ಲಿ   ಐಡಿಬಿಐ ಬ್ಯಾಂಕು ವ್ಯವಸ್ಥಾಪಕ ನಿರ್ದೇಶಕ ಬಿಕೆ ಬಾತ್ರ ವಿರುದ್ಧದ ಸಂಚಿನ ಪ್ರಕರಣ ಸೇರಿದಂತೆ ಸಿಬಿಐ ಎಲ್ಲಾ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.

ವಿಜಯ್ ಮಲ್ಯ ಹಸ್ತಾಂತರ ಪ್ರಕರಣದಲ್ಲಿ ಒಂದು ವೇಳೆ ನ್ಯಾಯಾಧೀಶರು ಭಾರತದ ಪರವಾಗಿ ತೀರ್ಪು ನೀಡಿದ್ದರೆ ಮಲ್ಯ ಅವರನ್ನು ಭಾರತಕ್ಕೆ  ಹಸ್ತಾಂತರ ಆದೇಶಕ್ಕೆ   ಲಂಡನ್  ಗೃಹ ಕಾರ್ಯದರ್ಶಿ ಸಹಿ  ಹಾಕಲು ಎರಡು ತಿಂಗಳು ಬೇಕಾಗುತ್ತದೆ.

ಆದಾಗ್ಯೂ, ಮ್ಯಾಜಿಸ್ಟ್ರೇಟ್  ನ್ಯಾಯಾಲಯದ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಂಗಕ್ಕೆ ಮೇಲ್ಮನವಿ ಸಲ್ಲಿಸಲು ಇಬ್ಬರಿಗೂ ಅವಕಾಶವಿದೆ. ಒಂದು ವೇಳೆ ಮಲ್ಯ ಅವರನ್ನು ಲಂಡನ್ ನಿಂದ ಹಸ್ತಾಂತರಿಸಿದ್ದರೆ ಅವರನ್ನು ಮುಂಬೈಯ ಅರ್ಥರ್ ರೋಡ್ ನಲ್ಲಿರುವ  ಕಾರಾಗೃಹದಲ್ಲಿಡುವ ಸಾಧ್ಯತೆ ಇದೆ. ಈ ಕಾರಾಗೃಹದಲ್ಲಿನ ಬ್ಯಾರಕ್ 12ರ  ಪೋಟೋಗಳನ್ನು ನೀಡುವಂತೆ  ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. 

ಮಾರ್ಚ್ 2016 ರಿಂದಲೂ ವಿಜಯ್ ಮಲ್ಯ ಲಂಡನ್ ನಲ್ಲಿದ್ದು,ಕಳೆದ ವರ್ಷದ ಡಿಸೆಂಬರ್ 4 ರಿಂದಲೂ  ಹಸ್ತಾಂತರ ಪ್ರಕರಣದ ವಿಚಾರಣೆ ನಡೆಯುತ್ತಿದೆ.  ವಿಜಯ್ ಮಲ್ಯ ಉದ್ದೇಶಪೂರ್ವಕವಾಗಿ ದೇಶಬಿಟ್ಟಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.  ಹಲವು ದಿನಗಳ ನಂತರ  ಮಾಧ್ಯಮಗಳ ಮೂಲಕ ಮೌನ ಮುರಿದಿದ್ದ  ವಿಜಯ್ ಮಲ್ಯ ಸಿಬಿಐ ಹಾಗೂ ಇಡಿ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡುತ್ತಿವೆ.ಲಂಡನ್ ನಲ್ಲಿರುವ ತನ್ನೆಲ್ಲಾ ಆಸ್ತಿ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ, ಕರ್ನಾಟಕದಲ್ಲಿರುವ ತನ್ನ ಬಳಿ ಇರುವ ಆಸ್ತಿ ಮಾರಾಟ ಮಾಡಿ ಬ್ಯಾಂಕುಗಳಿಗೆ ಸಾಲ ಹಿಂದಿರುಗಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا