Urdu   /   English   /   Nawayathi

ರಸ್ತೆ ಬದಿ ಹುದುಗಿಸಿಟ್ಟಿದ್ದ ಬಾಂಬ್ ಸ್ಪೋಟಗೊಂಡು ಬಸ್‍ನಲ್ಲಿದ್ದ 8 ಮಂದಿ ಸಾವು

share with us

ಹರಾತ್: 31 ಜುಲೈ (ಫಿಕ್ರೋಖಬರ್ ಸುದ್ದಿ) ರಸ್ತೆ ಬದಿ ಹುದುಗಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಎಂಟು ಮಂದಿ ಮೃತಪಟ್ಟು, ಇತರ 40 ಜನರು ತೀವ್ರ ಗಾಯಗೊಂಡಿರುವ ಘಟನೆ ಪಶ್ಚಿಮ ಆಫ್ಥಾನಿಸ್ತಾನದಲ್ಲಿ ಇಂದು ನಡೆದಿದೆ. ಇದು ತಾಲಿಬಾನ್ ಉಗ್ರರ ಕೃತ್ಯವಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ನಡೆಸಲು ತಾಲಿಬಾನ್ ಉಗ್ರರು ರಸ್ತೆ ಬದಿ ಬಾಂಬ್ ಇಟ್ಟಿದ್ದರು. ಆದರೆ ಅದು ಪ್ರಯಾಣಿಕರ ಬಸ್ಸೊಂದು ಬರುತ್ತಿದ್ದಾಗ ಸ್ಫೋಟಗೊಂಡಿತು. ಈ ದುರ್ಘಟನೆಯಲ್ಲಿ ಮಹಿಳೆಯರೂ ಮತ್ತು ಮಕ್ಕಳೂ ಸೇರಿ ಎಂಟು ಮಂದಿ ಹತರಾದರು.   40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا