Urdu   /   English   /   Nawayathi

ನಾಯಿ ಉಳಿಸಲು ಹೋಗಿ ಚಿರತೆ ದಾಳಿಗೆ ತುತ್ತಾದ

share with us

ಮುಂಬಯಿ: 30 ಜುಲೈ (ಫಿಕ್ರೋಖಬರ್ ಸುದ್ದಿ) ಮನೆ ಹೊರಗೆ ಕಟ್ಟಿಹಾಕಲಾಗಿದ್ದ ಸಾಕು ನಾಯಿ(ರೊಟ್ವೀಲರ್)ಯನ್ನು ರಕ್ಷಿಸಲು ಹೋದ ವ್ಯಕ್ತಿಯ ಮೇಲೆ ಚಿರತೆ ದಾಳಿನಡೆಸಿದ ಘಟನೆ ಮುಂಬಯಿನ ಮುಲುಂದ್‌ ಕಾಲೋನಿಯ ರಾಹುಲ್ ನಗರದಲ್ಲಿ ನಡೆದಿದೆ. ಶನಿವಾರ ತಡ ರಾತ್ರಿ ನಡೆದ ಚಿರತೆ ದಾಳಿಯಲ್ಲಿ ಗಂಭೀರ ಗಾಯಗೊಂಡಿರುವ ಸೂರಜ್ ಉದಯ್ಬಾನ್ ಗವೈ (29) ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರಜ್ ಹೂಡಿಕೆ ಸಂಸ್ಥೆಯ ಉದ್ಯೋಗಿಯಾಗಿದ್ದು, ಪೋಷಕರ ಜತೆ ಮುಳುಂದ್ ಪ್ರದೇಶದಲ್ಲಿ ನೆಲೆಸಿದ್ದಾರೆ. 

'ಶನಿವಾರ ರಾತ್ರಿ ನಾವೆಲ್ಲರೂ ನಿದ್ದೆಗೆ ಜಾರಿದ ಬಳಿಕ ಸುಮಾರು 1.45ರ ಸುಮಾರಿಗೆ ಮನೆ ಹೊರ ಭಾಗದಲ್ಲಿ ಕಟ್ಟಲಾಗಿದ್ದ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲಾರಂಭಿಸಿತು. ಕೆಲ ದಿನಗಳ ಹಿಂದೆ ನಮ್ಮ ವರಾಂಡಾದಲ್ಲಿ ಹಾವೊಂದು ಬಂದಿತ್ತು. ಅಂದಿನಂತೆ ಇಂದು ಸಹ ಹಾವು ಬಂದಿರಬಹುದು, ಅದಕ್ಕೆ ನಾಯಿ ಬೊಗಳುತ್ತಿದೆ ಎಂದುಕೊಂಡ ಸೂರಜ್ ಕದ ತೆರೆದು ಮನೆ ಹೊರಗೆ ಹೋದ. ಆಗ ಚಿರತೆಯೊಂದು ಆತನ ಮೇಲೆ ದಾಳಿ ಮಾಡಿತು. ಬಳಿಕ ನಾಯಿ ಮೇಲೆಯೂ ಸಹ ದಾಳಿ ನಡೆಸಿ ಸ್ಥಳದಿಂದ ಪಾರಾರಿಯಾಯಿತು' ಎಂದು ದಾಳಿಗೊಳಗಾದ ಸೂರಜ್ ಚಿಕ್ಕಪ್ಪ ಹೇಳಿದ್ದಾರೆ. 

ಚಿರತೆ ದಾಳಿಯಲ್ಲಿ ಸೂರಜ್ ಬಲಗಣ್ಣಿನ ಕೆಳ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ, ಸೂರಜ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಚಿರತೆಗಾಗಿ ಸತತ 4 ಗಂಟೆಗಳ ಕಾಲ ಚಿರತೆ ಶೋಧಕಾರ್ಯ ನಡೆಸಿದರು. ಕೊನೆಗೆ ಎಸ್‌ಜಿಎನ್‌ಪಿ ತಂಡ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. 

ಇತ್ತೀಚಿನ ದಿನಗಳಲ್ಲಿ ಮುಲುಂದ್ ಹಾಗೂ ಭಂಡಪ್ ಪ್ರದೇಶದಲ್ಲಿ ಚಿರತೆ ದಾಳಿಯ ಅನೇಕ ಪ್ರಕರಣಗಳು ವರದಿಯಾಗಿವೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا