Urdu   /   English   /   Nawayathi

15 ವರ್ಷಕ್ಕೆ ಎಂಜಿನಿಯರ್ ಆದ ಭಾರತೀಯ ಮೂಲದ ಬಾಲಕ

share with us

ವಾಷಿಂಗ್ಟನ್: 30 ಜುಲೈ (ಫಿಕ್ರೋಖಬರ್ ಸುದ್ದಿ) ಭಾರತದ ಮೂಲದ ಅಮೇರಿಕನ್ ಬಾಲಕನೋರ್ವ 15ನೇ ವಯಸ್ಸಿಗೆ ಬಯೋ- ಮೆಡಿಕಲ್ ಎಂಜಿನಿಯರಿಂಗ್ ಪದವಿ ಪಡೆದಕೊಂಡಿದ್ದು, ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದಾನೆ. ಕ್ಯಾಲಿಪೋರ್ನಿಯಾ ನಿವಾಸಿಯಾಗಿರುವ ಇದೇ ಬಾಲಕ ತನ್ನ 11ನೇ ವರ್ಷಕ್ಕೆ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆ ಅಧ್ಯಯನ ವಿಷಯಗಳಲ್ಲಿ ಪದವಿ ಪಡೆದುಕೊಂಡು ಸುದ್ದಿಯಾಗಿದ್ದ. ಮತ್ತೀಗ ಎಂಜಿನಿಯರಿಂಗ್ ಪದವಿ ಪಡೆಯುವುದರ ಮೂಲಕ ಸಾಧನೆಯ ಮತ್ತೊಂದು ಮೆಟ್ಟಿಲು ಹತ್ತಿದ್ದಾನೆ. 

15 ವರ್ಷಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ, ಫಾದರ್ಸ್ ಡೇ ದಿನ ಗ್ರಾಜುಯೇಷನ್ ಕ್ಯಾಪ್ ತಲೆಗಿಟ್ಟುಕೊಂಡು ತನಿಷ್ಕ್ ಹೇಳಿದ್ದೇನೆಂದರೆ, ''12ನೇ ವರ್ಷಕ್ಕೆ ಆರಂಭಿಸಿದ್ದೆ, 14ನೇ ವಯಸ್ಸಿಗೆ ಮುಗಿಸಿದೆ. ನಂಬಿ ನನ್ನ, ನಾನೀಗ ಎಂಜಿನಿಯರ್''. 

ಮಗನ ಸಾಧನೆಗೆ ಅಭಿಮಾನ ವ್ಯಕ್ತ ಪಡಿಸುತ್ತಾ ಪಶುವೈದ್ಯೆಯಾಗಿರುವ ಅವರಮ್ಮ ತಾಜಿ ಅಬ್ರಾಹಂ ಹೇಳುತ್ತಾರೆ, ''ಇದು ನನ್ನ ಪತಿಗೆ ಮತ್ತು ನನ್ನ ತಂದೆಗೆ, ಫಾದರ್ಸ್ ಡೇ ದಿನ ನನ್ನ ಮಗ ನೀಡಿರುವ ದೊಡ್ಡ ಉಡುಗೊರೆ''. 

ವಿ, ಕ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا