Urdu   /   English   /   Nawayathi

‘ಹಿಂದೂಗಳು ಮೇಕೆ ಮಾಂಸ ತ್ಯಜಿಸಬೇಕು’ ಎಂಬ ಬೋಸ್ ಹೇಳಿಕೆಗೆ ವ್ಯಾಪಕ ಆಕ್ರೋಶ

share with us

ಕೊಲ್ಕತ್ತಾ: 28 ಜುಲೈ (ಫಿಕ್ರೋಖಬರ್ ಸುದ್ದಿ) ರಾಷ್ಟ್ರಪತಿ ಗಾಂಧೀಜಿಯರು ಮೇಕೆಯನ್ನು ಮಾತೆ ಎಂದೇ ಪರಿಗಣಿಸಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ಸೇವನೆಯನ್ನೂ ತ್ಯಜಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕುಮಾರ್ ಬೋಸ್ ನೀಡಿದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್, ಧೀಜಿಯವರಾಗಲೀ, ನಿಮ್ಮ ಅಜ್ಜನಾಗಲೀ ಮೇಕೆಯನ್ನು ಮಾತೆ ಎಂದಿಲ್ಲ. ಇದು ನಿಮ್ಮ ನಿರ್ಣಯ. ಗಾಂಧೀಜಿಯಾಗಲೀ ಇತರ ಯಾರೇ ಆಗಲಿ ಹಿಂದೂ ಸಂರಕ್ಷಕರೆಂದು ಹೇಳಿಕೊಳ್ಳಲಿಲ್ಲ. ಹಿಂದೂಗಳಿಗೆ ಗೋವು ಮಾತೆ. ಮೇಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಇಂಥ ವಿವಾದ ಹುಟ್ಟುಹಾಕಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸರ ಮೊಮ್ಮಗ ಹಾಗೂ ಚಂದ್ರಕುಮಾರ್ ಬೋಸ್ ಅವರು, ಗಾಂಧೀಜಿಯವರು ನಮ್ಮ ತಾತ ಶರತ್‍ಚಂದ್ರ ಬೋಸ್ ಉಡ್‍ಬರ್ನ್ ಪಾರ್ಕ್ ಮನೆಯಲ್ಲಿ ತಂಗುತ್ತಿದ್ದರು. ಮೇಕೆ ಹಾಲು ಕೇಳುತ್ತಿದ್ದರು! ಇದಕ್ಕಾಗಿ ಎರಡು ಆಡುಗಳನ್ನು ತರಲಾಗಿತ್ತು. ಹಿಂದೂ ಸಂರಕ್ಷಕರಾದ ಗಾಂಧಿ ಮೇಕೆಗಳನ್ನೂ ಮಾತೆ ಎಂದು ಪರಿಗಣಿಸಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ತಿನ್ನುವುದು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا