Urdu   /   English   /   Nawayathi

ಗಗನಚುಂಬಿ ಕಟ್ಟಡದಿಂದ ಧುಮ್ಮಿಕ್ಕುತ್ತಿದೆ ವಿಶ್ವದ ಬೃಹತ್ ಕೃತಕ ಜಲಪಾತ..!

share with us

ಬೀಜಿಂಗ್: 28 ಜುಲೈ (ಫಿಕ್ರೋಖಬರ್ ಸುದ್ದಿ) ಚೀನಾದ ಗುಯಾಂಗ್ ನಗರದಲ್ಲಿ ಮುಗಿಲಚುಂಬಿ ಕಟ್ಟಡವೊಂದರ ಮೇಲೆ ವಿಶ್ವದ ಬೃಹತ್ ಕೃತಕ ಜಲಪಾತವೊಂದು ನಿರ್ಮಾಣವಾಗಿದೆ..! ಅತ್ಯಾಧುನಿಕ ವಿನ್ಯಾಸದ ಕಟ್ಟಡದಲ್ಲಿ ದೊಡ್ಡ ಜಲಧಾರೆಯ ಈ ವಾಸ್ತು ವಿನ್ಯಾಸ ಎಲ್ಲರನ್ನು ಬೆರಗುಗೊಳಿಸಿದೆ. 121 ಮೀಟರ್‍ಗಳಷ್ಟು ಎತ್ತರದ ಲೀಬಿಯನ್ ಇಂಟರ್‍ನ್ಯಾಷನಲ್ ಟವರ್ ಕಟ್ಟಡದ ಮೇಲ್ಭಾಗದಿಂದ 305 ಅಡಿಗಳಷ್ಟು ಎತ್ತರದಿಂದ ಈ ಕೃತಕ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ಜನಾಕರ್ಷಕಣೆಗೆ ಪಾತ್ರವಾಗಿದೆ.

ಚೀನಾದ ಪ್ರಸಿದ್ಧ ಕಟ್ಟಡ ನಿರ್ಮಾಣ ಸಂಸ್ಥೆ ಲೂಡಿ ಇಂಡಸ್ಟ್ರಿ ಗ್ರೂಪ್‍ನ ವಾಸ್ತುಶಿಲ್ಪಿಗಳು ಈ ಕಟ್ಟಡ ಮತ್ತು ಕೃತಕ ಜಲಪಾತದ ರೂವಾರಿಗಳು. ಈ ಕಟ್ಟಡದಲ್ಲಿ ದೊಡ್ಡ ಶಾಪಿಂಗ್ ಮಾಲ್, ಪಂಚತಾರಾ ಹೋಟೆಲ್ ಹಾಗೂ ಕಚೇರಿಗಳಿವೆ. ಬೃಹತ್ ಕಟ್ಡಡದ ಒಂದು ಪಾಶ್ರ್ವದಲ್ಲಿ ನಿರ್ಮಿಸಿರುವ ಕೃತಕ ಜಲಪಾತವನ್ನು ಪಂಪ್ ಮಾಡಿ ಜಲಧಾರೆಯನ್ನು ಪುನರಾವರ್ತಿಸಲು ನಾಲ್ಕು ಬೃಹತ್ ಪಂಪ್‍ಗಳನ್ನು ಅಳವಡಿಸಲಾಗಿದೆ.

Water-Falls--02

ಕೃತಕ ಜಲಪಾತ ಇರುವ ವಿಶೇಷ ವಿನ್ಯಾಸ ಗಗನಚುಂಬಿ ಕಟ್ಟಡ ನಿರ್ಮಿಸುವಾಗ ತಂತ್ರಶಿಲ್ಪಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈ ಜಲಪಾತದಿಂದ ನೀರು ಧುಮ್ಮಕ್ಕುವಂತೆ ಮಾಡಲು ಒಂದು ಗಂಟೆಗೆ 120 ಡಾಲರ್ (ಸುಮಾರು 8,100 ರೂ.ಗಳಾಗುತ್ತವೆ. ದುಬಾರಿ ವೆಚ್ಚವಾಗುವ ಹಿನ್ನೆಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಲು ಉದ್ದೇಶಿಸಲಾಗಿದೆ.Water-Falls--03

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا