Urdu   /   English   /   Nawayathi

ಆನ್‌ಲೈನ್ ವೀಡಿಯೋ ನೋಡಿ ಹೆರಿಗೆ ದುಸ್ಸಾಹಸ: ಬಾಣಂತಿ ಸಾವು

share with us

ತಿರುಪುರ: 26 ಜುಲೈ (ಫಿಕ್ರೋಖಬರ್ ಸುದ್ದಿ) ವೈದ್ಯಕೀಯ ಸಹಾಯವಿಲ್ಲದೆ ಯೂಟ್ಯೂಬ್ವೀಡಿಯೋ ನೆರವಿನಿಂದ ಹೆರಿಗೆ ದುಸ್ಸಾಹಸ ಮಾಡಿ ಬಾಣಂತಿ ಸಾವನ್ನಪ್ಪಿರುವ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಖಾಸಗಿ ಶಾಲೆಯ ಶಿಕ್ಷಕಿ ಕೃತಿಕಾ (28) ಮೃತ ದುರ್ದೈವಿ. ಕೃತಿಕಾ ಪತಿ ನೈಟ್‌ವೇರ್ ಕಂಪೆನಿಯ ಉದ್ಯೋಗಿಯಾಗಿದ್ದು, ಈ ದಂಪತಿಗೆ ಮೂರು ವರ್ಷದ ಮುದ್ದಾದ ಮಗಳಿದ್ದಾಳೆಂದು ತಿಳಿದು ಬಂದಿದೆ. 

ಮೃತ ಮಹಿಳೆ ಮೊದಲ ಮಗುವಿಗೆ ಆಸ್ಪತ್ರೆಯಲ್ಲೇ ಜನ್ಮ ನೀಡಿದ್ದರು. ಪತಿ ನೈಸರ್ಗಿಕ ವೈದ್ಯ ಪದ್ಧತಿ ಇಷ್ಟ ಪಡುತ್ತಾರೆಂಬ ಕಾರಣಕ್ಕೆ ಎರಡನೇ ಮಗುವನ್ನು ಮನೆಯಲ್ಲೇ ಹೆರಬೇಕೆಂದು ಯೋಜನೆ ರೂಪಿಸಿದ್ದರು. ಹೆರಿಗೆ ವೇಳೆ ಪತಿ ಜತೆ ಇಬ್ಬರೂ ಸ್ನೇಹಿತರೂ ಇದ್ದರು. 

ಸಹೋದ್ಯೋಗಿಯೊಬ್ಬರ ಪತ್ನಿ ಲಾವಣ್ಯ ಎಂಬವರ ಹೆರಿಗೆ ಮನೆಯಲ್ಲೇ ಆಗಿದೆ ಎಂಬ ವಿಷಯ ಅರಿತ ಬಳಿಕ ಕೃತಿಕಾ ಅವರ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು ಎಂದು ಅವರ ತಂದೆ ರಾಜೇಂದ್ರನ್ ಹೇಳಿಕೊಂಡಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا