Urdu   /   English   /   Nawayathi

ಬೀಜಿಂಗ್‌: ಅಮೆರಿಕ ದೂತಾವಾಸದ ಹೊರಗೆ ಭಾರೀ ಸ್ಫೋಟ, ದಟ್ಟ ಕಪ್ಪು ಹೊಗೆ

share with us

ಬೀಜಿಂಗ್‌: 26 ಜುಲೈ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಅಮೆರಿಕ ದೂತಾವಾಸದ ಬಳಿ ಇಂದು ಗುರುವಾರ ಭಾರೀ ದೊಡ್ಡ ಸ್ಫೋಟ ಸಂಭವಿಸಿತೆಂದು ಹಲವಾರು ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಚೀನದ ರಾಜಧಾನಿಯಾಗಿರುವ ಬೀಜಿಂಗ್‌ನಲ್ಲಿನ ರಾಜತಾಂತಿಕ ಕಾರ್ಯಾಲಯಗಳು ಇರುವ ಆವರಣದ ಹೊರಗೆ ಆಗಸದಲ್ಲಿ ದಟ್ಟನೆಯ ಕಪ್ಪು ಹೊಗೆ ಎತ್ತರಕ್ಕೆ ಏರುತ್ತಿದ್ದುದರ ವಿಡಿಯೋ ಚಿತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿವೆ.

ಸ್ಫೋಟ ಸಂಭವಿಸಿದ ತಾಣವನ್ನು ಪೊಲೀಸರು ಸುತ್ತುವರಿದಿರುವುದಾಗಿ ತಿಳಿಸಿರುವ ಪ್ರತ್ಯಕ್ಷದರ್ಶಿಗಳು ಸ್ಫೋಟ ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ.

ವೀಸಾ ಸಂದರ್ಶನಕ್ಕಾಗಿ ಅಮೆರಿಕ ದೂತಾವಾಸದ ಹೊರಗೆ ಚೀನೀ ಪೌರರು ಸಾಲುಗಟ್ಟಿ ನಿಲ್ಲುವ ತಾಣಕ್ಕೆ ಸಮೀಪವೇ ಈ ಸ್ಫೋಟ ನಡೆದಿರುವಂತೆ ಕಂಡುಬಂದಿದೆ. 

ಆದರೆ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಲು ತತ್‌ಕ್ಷಣಕ್ಕೆ ಲಭ್ಯವಾಗಿಲ್ಲ. ಜತೆಗೆ ಪ್ರತ್ಯಕ್ಷದರ್ಶಿಗಳ ವಿವರಗಳಲ್ಲಿ ವಿರೋಧಾತ್ಮಕತೆಯೂ ಕಂಡು ಬಂದಿದೆ. 

ಘಟನೆ ಬಗ್ಗೆ ಅಮೆರಿಕ ದೂತಾವಾಸ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಚೀನೀ ಅಧಿಕಾರಿಗಳು ಕೂಡ ತತ್‌ಕ್ಷಣದ ಪ್ರತಿಕ್ರಿಯೆಗೆ ಅಲಭ್ಯರಾಗಿದ್ದಾರೆ. 

ಸ್ಫೋಟ ನಡೆದಿರುವ ತಾಣವು ಬೀಜಿಂಗ್‌ ಹೊರವಲಯದಲ್ಲಿದೆ ಮತ್ತು ಇಲ್ಲಿ ಅನೇಕ ರಾಷ್ಟ್ರಗಳ ದೂತಾವಾಸಗಳು ಇವೆ. ಇವುಗಳಲ್ಲಿ ಭಾರತ, ಅಮೆರಿಕ ಮತ್ತು ಇಸ್ರೇಲ್‌ ದೂತಾವಾಸಗಳೂ ಸೇರಿವೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا