Urdu   /   English   /   Nawayathi

22 ವರ್ಷಗಳ ಹೋರಾಟದ ನಂತರ ನನಗೆ ಪಾಕ್‌ ಸೇವೆ ಮಾಡಲು ಅವಕಾಶ ದೊರೆತಿದೆ: ಇಮ್ರಾನ್‌ ಖಾನ್‌

share with us

ಇಸ್ಲಾಮಾಬಾದ್‌: 26 ಜುಲೈ (ಫಿಕ್ರೋಖಬರ್ ಸುದ್ದಿ) ಹಿಂಸಾಚಾರದ ನಡುವೆಯೇ ಮುಗಿದ ಪಾಕಿಸ್ತಾನದ ಚುನಾವಣೆ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಹೊಸ ಕ್ಯಾಪ್ಟನ್‌ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, 22 ವರ್ಷಗಳ ಹೋರಾಟದ ನಂತರ ನನಗೆ ಪಾಕಿಸ್ತಾನದ ಸೇವೆ ಮಾಡಲು ಅವಕಾಶ ದೊರೆತಿದೆ ಎಂದರು. 

ಅಲ್ಲದೇ ಭಾರತದ ಜತೆ ಉತ್ತಮ ಸೌಹೌರ್ದ ಸಂಬಂಧ ಮುಂದುವರಿಸುವ ಬಗ್ಗೆಯೂ ಇರಾದೆ ಇದೆ. ಉಭಯ ದೇಶಗಳ ನಡುವಿನ ಸಮಸ್ಯೆಯನ್ನು ನಾವು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಇಮ್ರಾನ್ ಖಾನ್‌ ತಿಳಿಸಿದ್ದಾರೆ. 

ಕೆಲವು ಮಾಧ್ಯಮಗಳಲ್ಲಿ ನನ್ನನ್ನು ಭಾರತ ವಿರೋಧಿ ಎಂಬಂತೆ ಬಿಂಬಿಸಲಾಗಿದೆ. ಇದು ಅವರ ನಕಾರಾತ್ಮಕ ಗುಣಗಳನ್ನು ತೋರಿಸುತ್ತದೆ. ದಕ್ಷಿಣ ಏಷ್ಯಾ ಖಂಡ ಅಭಿವೃದ್ಧಿಯಾಗಿರಬೇಕಾದರೆ ಬಡತನ ಮುಕ್ತ ದೇಶವಾಗಬೇಕು. ಇದಕ್ಕಾಗಿ ಉಭಯ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು. 

 

View image on Twitter

ANI✔@ANI

Kashmiris are suffering for long. We have to solve Kashmir issue by sitting across the table, If India's leadership is willing then the both of us can solve this issue through dialogue. It will be good for the subcontinent also: Imran Khan,PTI Chief

5:59 PM - Jul 26, 2018

ಹಲವು ದಶಕಗಳಿಂದಲೂ ಇರುವ ಜಮ್ಮು ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕಾದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಇಮ್ರಾನ್‌ ಖಾನ್‌ ತಿಳಿಸಿದರು. 

View image on Twitter

ANI✔@ANI

I was saddened by the way Indian media recently projected me. I am one of those Pakistanis that wants good relations with India, if we want to have a poverty free subcontinent then we must have good relations and trade ties: Imran Khan

5:57 PM - Jul 26, 2018

View image on Twitter

PTI✔@PTIofficial

"Yahaan Ka mausam badalnay wala hai, Yahaan koi aanay wala hai. Imran Khan to address the nation shortly"!

4:55 PM - Jul 26, 2018

ದೇಶದ ಅಭಿವೃದ್ಧಿಗೆ ಹಾಕಿಕೊಂಡಿರುವ ನನ್ನದೇ ಆದ ಪ್ರಣಾಳಿಕೆಗಳನ್ನು ಜಾರಿಗೆ ತರಲು ಇದು ಸಕಾಲವಾಗಿದೆ ಎಂದು ಇಮ್ರಾನ್‌ ಖಾನ್‌ ಹೇಳಿದರು. 

ಇದೊಂದು ಐತಿಹಾಸಿಕ ಚುನಾವಣೆಯಾಗಿದೆ. ಇಡೀ ದೇಶದ ನಾಗರಿಕರು ನಮ್ಮ ಪಕ್ಷದ ಪರವಾಗಿ ಬೆಂಬಲಕ್ಕೆ ನಿಂತಿರುವುದಕ್ಕೆ ಆಭಾರಿಯಾಗಿದ್ದೇನೆ. ಪ್ರತಿಯೊಬ್ಬ ನಾಗರಿಕನಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಅಲ್ಲದೇ ಮತದಾನ ನಡೆಯಲು ಎಲ್ಲ ರೀತಿಯ ಭದ್ರತಾ ನೀಡಿದ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಮ್ರಾನ್‌ ತಮ್ಮ ಭಾಷಣಕ್ಕೆ ಮಂಗಳ ಹಾಡಿದರು. 

ವಿ, ಕ ವರದಿ   

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا