Urdu   /   English   /   Nawayathi

ಚಂದ್ರನ ಮೇಲೆ ಮೊದಲು ಕಾಲಿಟ್ಟಾಗ 106 ವಸ್ತುಗಳನ್ನು ಬಿಟ್ಟುಬಂದ ಆರ್ಮ್‍ಸ್ಟ್ರಾಂಗ್-ಬುಜ್..!

share with us

ವಾಷಿಂಗ್ಟನ್: 24 ಜುಲೈ (ಫಿಕ್ರೋಖಬರ್ ಸುದ್ದಿ) ಚಂದ್ರನ ಮೇಲೆ ಪ್ರಥಮ ಬಾರಿ ಕಾಲಿಟ್ಟ ಅಮೆರಿಕದ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಬುಜ್ ಅಲ್‍ಡ್ರಿನ್ ವಿಶ್ವವಿಖ್ಯಾತಿ ಗಳಿಸಿದರು ನಿಜ.. ಆದರೆ ಈ ಗಗನಯಾತ್ರಿಗಳು 49 ವರ್ಷಗಳ ಹಿಂದೆಯೇ ಶಶಾಂಕನ ಸನ್ನಿಧಾನಕ್ಕೆ ಭೇಟಿ ನೀಡಿದ್ದಕ್ಕೆ ಪ್ರತಿಯಾಗಿ ಇವರು ಮಾನವ ತ್ಯಾಜ್ಯ ಸೇರಿದಂತೆ 106 ವಸ್ತುಗಳ ಕಸದ ಉಡುಗೊರೆ ನೀಡಿದ್ದಾರೆ!

ನೀಲ್ ಮತ್ತು ಬುಜ್ 23ನೇ ಜುಲೈ, 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಪ್ರಥಮ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 21 ಗಂಟೆ 5 ನಿಮಿಷಗಳ ಕಾಲ ಅಲ್ಲಿದ್ದ ಇವರು 24ನೇ, ಜುಲೈ 1969ರಂದು ಭೂಮಿಗೆ ಹಿಂದಿರುಗಿದರು. ಧರೆಗೆ ಮರಳುವುದಕ್ಕೆ ಮುನ್ನ ಇವರು ಮಲಮೂತ್ರಗಳು, ಸಾಧನ-ಸಲಕರಣೆಗಳು, ಸೇರಿದಂತೆ 106 ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಬಂದರು. ಚಂದ್ರಯಾನಕ್ಕೆ 49 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಚಂದ್ರದ ಅಂಗಳದಲ್ಲಿ ಮಾನವನ ಪ್ರಥಮ ತ್ಯಾಜ್ಯ ಸೃಷ್ಟಿಯ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا