Urdu   /   English   /   Nawayathi

ಕತರ್: 600 ಮಂದಿ ಭಾರತೀಯರಿಗೆ ಸಂಕಷ್ಟ

share with us

ಕತರ್: ಮುಂದಿನ ಫ‌ುಟ್ಬಾಲ್‌ ವಿಶ್ವಕಪ್‌ನ ಆತಿಥೇಯ ರಾಷ್ಟ್ರವಾದ ಕತಾರ್‌ನಲ್ಲಿ ಕ್ರೀಡಾಂಗಣ ಮತ್ತು ಇತರ ಮೂಲ ಸೌಕರ್ಯಗಳ ಕೆಲಸಕ್ಕಾಗಿ ತೆರಳಿದ್ದ 600 ಮಂದಿ ಭಾರತೀಯರು ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಪೈಕಿ ಕೇರಳ ಮೂಲದವರೂ ಇದ್ದು, ತಮ್ಮ ದಯನೀಯ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ತೆರಳಿರುವ ಭಾರತೀಯ ಕಾರ್ಮಿಕರೇ ಮೂಲಸೌಕರ್ಯಗಳ ಕೊರತೆಯಿಂದ ಬಳಲುವಂತಾಗಿದೆ. ಆರು ತಿಂಗಳಿಂದ ಅವರಿಗೆ ವೇತನ ಪಾವತಿ ಆಗಿಲ್ಲ. ಸೂಕ್ತ ಆಹಾರವೂ ಸಿಗುತ್ತಿಲ್ಲ. ಹೀಗಾಗಿ, ದಾನಿಗಳು ನೀಡುವ ಆಹಾರಕ್ಕಾಗಿ ಕೈಚಾಚುವಂತಾಗಿದೆ. ಜತೆಗೆ ಕೆಲವರಿಗೆ ಉದ್ಯೋಗವೂ ನಷ್ಟವಾಗಿದ್ದು, ನೀಡಲಾಗಿದ್ದ ವೀಸಾ ಅವಧಿ ಕೂಡ ಮುಕ್ತಾಯವಾಗಿದೆ. ಎಚ್‌ಕೆಎಚ್‌ ಜನರಲ್‌ ಕಾಂಟ್ರಾಕ್ಟಿಂಗ್‌ ಕಂಪನಿ ಎಂಬ ಕತಾರ್‌ನ ಸಂಸ್ಥೆ 1,200 ಮಂದಿಯನ್ನು ಉದ್ಯೋಗಕ್ಕಾಗಿ ನಿಯೋಜಿಸಿತ್ತು. ಯುಎಇನಲ್ಲಿ ಕಳೆದ ವರ್ಷದಿಂದ ಕಂಡು ಬರುತ್ತಿರುವ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಉದ್ಯೋಗ ನಷ್ಟವಾಗಿದೆ.

6 ತಿಂಗಳಿಂದ ವೇತನವಿಲ್ಲ: ತಮ್ಮ ನೋವು ತೋಡಿಕೊಂಡಿರುವ ಕೇರಳದ ಎಸ್‌. ಕುಮಾರ್‌, "ನಮಗೆ ಸಹಾಯ ಮಾಡುತ್ತಿರುವವರ ಕರುಣೆಯಿಂದ ಇದ್ದೇವೆ. ಅವರು ನಮಗೆ ಆಹಾರ ನೀಡುತ್ತಿದ್ದಾರೆ. ಹಗಲಿನ ವೇಳೆ ನಾವು ಇರುವ ಸ್ಥಳಕ್ಕೆ ವಿದ್ಯುತ್‌ ಪೂರೈಕೆ ಇಲ್ಲ. ರಾತ್ರಿ ವೇಳೆ ಹೇಗೋ ಜನರೇಟರ್‌ ವ್ಯವಸ್ಥೆ ಸಿಗುತ್ತದೆ. ನಾನು ಎಂಟು ವರ್ಷಗಳ ಹಿಂದೆಯೇ ಕತಾರ್‌ಗೆ ಉದ್ಯೋಗಕ್ಕಾಗಿ ಬಂದಿದ್ದು, ಕಳೆದ 6 ತಿಂಗಳಿಂದ ವೇತನವೂ ಸಿಗುತ್ತಿಲ್ಲ' ಎಂದಿದ್ದಾರೆ. ಇದೇ ವೇಳೆ, 9 ವರ್ಷಗಳ ಕಾಲ ಇದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಲಂಬರ್‌ವೊಬ್ಬರು, "ನನಗೆ ತೀವ್ರ ಅನಾರೋಗ್ಯ  ಉಂಟಾಗಿದ್ದಾಗಲೂ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ಸಾಧ್ಯವಾಗಲಿಲ್ಲ. ಏಕೆಂದರೆ, ನನ್ನ ವೀಸಾ ಅವಧಿ ಮುಗಿದಿದೆ. ಹೊರಗೆ ಹೋದರೆ ಬಂಧನಕ್ಕೀಡಾಗುವ ಭೀತಿಯಿಂದ ಎಲ್ಲಿಗೂ ಹೋಗುತ್ತಿಲ್ಲ' ಎಂದಿದ್ದಾರೆ.

ಪತ್ರ ಬರೆದರೂ ಸಿಗದ ಸ್ಪಂದನೆ 
ಸಮಸ್ಯೆ ಬಗ್ಗೆ ಏ.10ರಂದು 25 ಮಂದಿ ಭಾರತೀಯರು ಕತಾರ್‌ನಲ್ಲಿರುವ ರಾಯಭಾರ ಕಚೇರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ರಾಯಭಾರ ಕಚೇರಿ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ. ಇದೇ ವೇಳೆ, 600
ಮಂದಿಯ ಪೈಕಿ 300 ಮಂದಿಗೆ ಇತರ ಕಂಪನಿಗಳಲ್ಲಿ ಉದ್ಯೋಗ ನೀಡಲಾಗಿದೆ ಮತ್ತು ಇತರರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಹೇಳಿರುವುದಾಗಿ "ಹಿಂದುಸ್ತಾನ್‌ ಟೈಮ್ಸ್‌' ವರದಿ ಮಾಡಿದೆ.

ಆರು ತಿಂಗಳಿಂದ ವೇತನವಿಲ್ಲ
ರಾಯಭಾರ ಕಚೇರಿ ಸಿಬ್ಬಂದಿ ಕಂಪನಿ ಜತೆಗೆ ಸಂಪರ್ಕಿಸಿದರೂ ಸ್ಪಂದನೆ ಇಲ್ಲ ಕೆಲವರಿಗೆ ಬೇರೆಡೆ ಸಿಕ್ಕಿದೆ ಉದ್ಯೋಗ, ಇನ್ನಿತರರು ಸ್ವದೇಶಕ್ಕೆ ಬರುವ ಹಾದಿಯಲ್ಲಿ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا