Urdu   /   English   /   Nawayathi

ಟೊರಾಂಟೋ: ರೆಸ್ಟೋರೆಂಟ್ ಬಳಿ ಗುಂಡಿನ ದಾಳಿ, ದಾಳಿಕೋರ ಸೇರಿ ಇಬ್ಬರ ಸಾವು, ಹಲವರಿಗೆ ಗಾಯ

share with us

ಟೊರಾಂಟೋ: 23 ಜುಲೈ (ಫಿಕ್ರೋಖಬರ್ ಸುದ್ದಿ) ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ಸಂಸ್ಕೃತಿ ಮುಂದುವರೆದಿದ್ದು, ಸೋಮವಾರ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ಜಾನೆ. ಸುಮಾರು 15 ಸುತ್ತಿಗೂ ಹೆಚ್ಚು ಬಾರಿ ದಾಳಿಕೋರ ಗುಂಡು ಹಾರಿಸಿದ್ದು, ಈ ವೇಳೆ ಹಲವರಿಗೆ ಗುಂಡೇಟು ತಗುಲಿದೆ. ಪರಿಣಾಮ ಹಲವರು ಸ್ಥಳದಲ್ಲೇ ಅಸುನೀಗಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ದಾಳಿ ಬಳಿಕ ದಾಳಿಕೋರನೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಟೊರಾಂಟೋದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಪ್ರಸ್ತುತ ದಾಳಿಗೀಡಾಗಿರುವ ರೆಸ್ಟೋರೆಂಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا