Urdu   /   English   /   Nawayathi

ಗರ್ಭಪಾತ ಮಾಡಿಸಿಕೊಂಡ ಅತ್ಯಾಚಾರ ಸಂತ್ರಸ್ತ ಬಾಲಕಿಗೆ 6 ತಿಂಗಳು ಜೈಲು ಶಿಕ್ಷೆ!

share with us

ಜಕಾರ್ತ್: 22 ಜುಲೈ (ಫಿಕ್ರೋಖಬರ್ ಸುದ್ದಿ) ತನ್ನ ಸಹೋದರನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ತಾಯಿಯಾಗಿದ್ದ 15 ವರ್ಷದ ಬಾಲಕಿ ಗರ್ಭಪಾತ ಮಾಡಿಸಿಕೊಂಡಿದಕ್ಕೆ ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಇಂಡೋನೇಷಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿ ಹಾಗೂ ಅತ್ಯಾಚಾರ ಎಸಗಿದ ಆಕೆಯ 17 ವರ್ಷದ ಸಹೋದರ ಇಬ್ಬರನ್ನು ವಿಚಾರಣೆ ನಡೆಸಿದ ಬಳಿಕ ಮೂರಾ ಬುಲಿಯನ್ ಜಿಲ್ಲಾ ಕೋರ್ಟ್ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ ಎಂದು ಕೋರ್ಟ್ ವಕ್ತಾರ ಲಿಸ್ಟಿಯೋ ಆರಿಫ್ ಬುಡಿಮನ್ ಅವರು ಹೇಳಿದ್ದಾರೆ.

ಗರ್ಭಪಾತ ಮಾಡಿಸಿಕೊಂಡ ಬಾಲಕಿಗೆ ಮಕ್ಕಳ ರಕ್ಷಣೆ ಕಾನೂನಡಿ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಸಹೋದರನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಾಲಕಿ ಮೇಲೆ ಸಹೋದರ ಎಂಟು ಬಾರಿ ಅತ್ಯಾಚಾರ ಎಸಗಿದ್ದು, ಬಾಲಕಿ ಆರು ತಿಂಗಳ ತಾಯಿಯಾದ ಬಳಿಕ ಗರ್ಭಪಾತ ಮಾಡಿಸಿದ್ದಾಳೆ ಎಂದು ವಕ್ತಾರರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا