Urdu   /   English   /   Nawayathi

ಕಾಶ್ಮೀರ: ಉಗ್ರರು ಅಪಹರಿಸಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆ

share with us

ಶ್ರೀನಗರ: 21 ಜುಲೈ (ಫಿಕ್ರೋಖಬರ್ ಸುದ್ದಿ) ಉಗ್ರರು ಅಪಹರಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ ಪೇದೆಯ ಮೃತದೇಹ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಜೆಯಲ್ಲಿದ್ದ ಪೊಲೀಸ್ ಪೇದೆ ಸಲೀಂ ಶಾಹ್ ನನ್ನು ಕಳೆದ ರಾತ್ರಿ ಅವರ ಕುಲ್ಗಾಮ್ ನ ಮುತಲ್ಹಮಾ ಪ್ರದೇಶಾದಲ್ಲಿರುವ ಮನೆಯಿಂದ ಉಗ್ರರು ಅಪಹರಿಸಿದ್ದರು.

ಅಪಹರಣಗೊಂಡ ಪೊಲೀಸ್ ಪೇದೆಯ ಪತ್ತೆಗೆ ಕಾರ್ಯಚರಣೆ ಆರಂಭಿಸಿದ್ದ ಭದ್ರತಾ ಪಡೆಗಳು ಇಂದು ಸಂಜೆ ಮೃತದೇಹ ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا