Urdu   /   English   /   Nawayathi

ಗೋವಾ: ಜುಲೈ ತಿಂಗಳ ಅಂತ್ಯದವರೆಗೆ ಹೊರ ರಾಜ್ಯಗಳ ಮೀನು ನಿಷೇಧ

share with us

ಕಾರವಾರ: 21 ಜುಲೈ (ಫಿಕ್ರೋಖಬರ್ ಸುದ್ದಿ) ಗೋವಾ ಸರ್ಕಾರವು ಜುಲೈ ತಿಂಗಳ ಅಂತ್ಯದವರೆಗೆ ಹೊರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಕರ್ನಾಟಕದ ಗಡಿಭಾಗವಾದ ಮಾಜಾಳಿಯಲ್ಲಿ ಕೇರಳ, ಕರ್ನಾಟಕ, ತಮಿಳುನಾಡುಗಳಿಂದ ಮೀನುಗಳನ್ನು ತುಂಬಿಕೊಂಡ ಹೊರಟಿದ್ದ ಮೀನು ಲಾರಿಗಳು ಗಡಿಯಿಂದಲೇ ಮರಳಿ ವಾಪಸ್ಸಾಗುತ್ತಿವೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಇತರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ಬುಧವಾರ ನಿಷೇಧಿಸಿದ್ದಾರೆ. ಅಲ್ಲದೆ, ಗಡಿಯಲ್ಲಿ ಇತರ ರಾಜ್ಯದ ಮೀನು ಲಾರಿಗಳನ್ನು ಒಳ ಬಿಡದಂತೆ ಅವರು ಚೆಕ್ ಪೋಸ್ಟ್ ಗಳಿಗೆ ಸೂಚನೆ ಹೊರಡಿಸಿದ್ದಾರೆ. ಇದರಿಂದಾಗಿ ಮೀನು ತುಂಬಿಕೊಂಡು ರಾಜ್ಯದ ಮೂಲಕ ಗೋವಾಕ್ಕೆ ತೆರಳಲು ಹೋಗಿದ್ದ ಅನೇಕ ಮೀನು ಲಾರಿಗಳನ್ನು ಗಡಿಯಲ್ಲಿ ಗೋವಾ ಪೊಲೀಸರು ತಡೆಹಿಡಿದ್ದಾರೆ.

ಗೋವಾ ಆಹಾರ ಮತ್ತು ಮಾದಕ ವಸ್ತುಗಳ ಅಡ್ಮಿನಿಸ್ಟ್ರೇಶನ್  ಗೋವಾದ ಕೆಲವೆಡೆ ಮೀನು ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದ ವೇಳೆ, ಮೀನುಗಳನ್ನು ಕೆಡದಂತೆ ಸಂರಕ್ಷಿಸಿಡಲು ಟಾಕ್ಸಿಕ್ ಆ್ಯಸಿಡ್ ಹಾಗೂ ಫಾರ್ಮಾಲಿನ್ ರಾಸಾಯನಿಕಗಳನ್ನು ಬಳಸುತ್ತಿರುವುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿತ್ತು. ಆದರೆ, ನಂತರ ಅದು ಈ ರಾಸಾಯನಿಕಗಳು ನೈಸರ್ಗಿಕ ಮಟ್ಟದಲ್ಲೇ ಇದೆ ಎಂದು ತಿಳಿಸಿತ್ತು. ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಇಲ್ಲ ಎಂಬ ಭೀತಿಯನ್ನು ಅದು ತನ್ನ ವರದಿಯಲ್ಲಿ ತಿಳಿಸಿತ್ತು.

ಆದರೂ ಸರ್ಕಾರ ಹೊರ ರಾಜ್ಯದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ವಿವಾದ ಸೃಷ್ಟಿಸಿದೆ. ಮುಂಗಾರು ಸಮಯದಲ್ಲಿ ಪ್ರತಿವರ್ಷವೂ ಜುಲೈ 31ರವರೆಗೆ ದೇಶದ ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಹೀಗಾಗಿ ಎಲ್ಲೆಡೆ ಈ ವೇಳೆ ಮೀನುಗಳ ಕೊರತೆ ಉಂಟಾಗುತ್ತದೆ. ಗೋವಾ ರಾಜ್ಯವು ಪ್ರವಾಸಿ ಕೇಂದ್ರ ಆಗಿರುವುದರಿಂದ ಇಲ್ಲಿಗೆ ಅತಿ ಹೆಚ್ಚು ಮೀನುಗಳ ಅಗತ್ಯ ಇದೆ.

ಆದರೆ, ಸ್ಥಳೀಯ ನಾಡದೋಣಿ ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿದು ಮೀನುಗಳನ್ನು ಹಿಡಿಯುತ್ತಿದ್ದಾರೆ. ಹೀಗಾಗಿ, ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸ್ಥಳೀಯ ಮೀನು ಲಭ್ಯವಿದೆ. ಹೀಗಾಗಿ ಇತರ ರಾಜ್ಯದ ಮೀನುಗಳ ಅವಶ್ಯಕತೆ ಈಗಿಲ್ಲ ಎಂದು ಸಿಎಂ ಪರಿಕ್ಕರ್ ನಿಷೇಧದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

‘ಇದು ಕೇವಲ ಮೀನುಗಳಿಗೆ ಮಾತ್ರವಲ್ಲ. ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡ ತಪಾಸಣೆಗಾಗಿ ತಿಳಿಸಿದ್ದೇವೆ. ಆಹಾರ ಪದಾರ್ಥಗಳಲ್ಲಿ ಯಾವುದೇ ಸಂರಕ್ಷಕ ರಾಸಾಯನಿಕಗಳು ಪತ್ತೆಯಾದರೆ ಅವುಗಳನ್ನೂ ನಿಷೇಧಿಸಲಾಗುವುದು’ ಎಂದು ಪರಿಕ್ಕರ್ ಹೇಳಿದ್ದಾರೆ.

ಆದರೆ, ಗೋವಾದ ವಿಪಕ್ಷಗಳು ಇದನ್ನು ಮುಖ್ಯಮಂತ್ರಿಯ ಈ ನಿರ್ಧಾರವನ್ನು ಖಂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಯನ್ನೂ ನಂಬಿ ಸಿಎಂ ಈ ನಿರ್ಧಾರಕ್ಕೆ ಬಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا