Urdu   /   English   /   Nawayathi

ಹರಿಯಾಣ: 120 ಮಹಿಳೆಯರ ಅತ್ಯಾಚಾರ ನಡೆಸಿದ್ದ 60 ವರ್ಷದ ಬಾಬಾ ಬಂಧನ

share with us

ಫತೇಹಬಾದ್(ಹರಿಯಾಣ): 21 ಜುಲೈ (ಫಿಕ್ರೋಖಬರ್ ಸುದ್ದಿ) ಹರಿಯಾಣದ 60) ವರ್ಷದ ಬಾಬಾ ಒಬ್ಬ 120 ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ  ಆರೋಪದಲ್ಲಿ ಬಂಧಿಸಲಾಗಿದೆ. ಆರೊಪಿಯನ್ನು ಬಾಬಾ ಅಮರ್ ಪೂರಿ ಎಂದು ಗುರುತಿಸಲಾಗಿದ್ದು ಈತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ ಸ್ವಾಮೀಜಿಯ ಬಂಧನವಾಗಿದೆ.

ಹರಿಯಾಣದ ಫತೇಹಬಾದ್ ಪ್ರದೇಶದಲ್ಲಿ ಬಾಬಾನನ್ನು ಬಂಧಿಸಲಾಗಿದ್ದು  ಸ್ವಾಮೀಜಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅವರಿಗೆ ಸಂಬಂಧಿಸಿ ಕೆಲ ಪ್ರದೇಶದ ಮೇಲೆ ದಾಳಿ ನಡೆಸಿದ್ದು ಅನುಮಾನಾಸ್ಪದವಾಗಿ ಕಂಡುಬಂದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲೀಸರು ಮಾಹಿತಿ ನಿಡಿದ್ದಾರೆ.

ಇದುವರೆಗೆ ಇಬ್ಬರು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬಾಬಾ ತಾನು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಆ ದೃಶ್ಯಗಳನ್ನು ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದ.ನಂತರ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ.  ಈತನ ವಶದಲ್ಲಿದ್ದ 120 ವಿಡಿಯೋ ಕ್ಲೀಪ್ ಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಮರ್ ಪೂರಿ ಬಾಬಾಹರಿಯಾಣದ ಫತೇಹಬಾದ್ ನ ಬಾಬಾ ಬಾಲ್ಕಾನಾಥ್ ದೇವಾಲಯದ ಸ್ವಾಮಿಯಾಗಿದ್ದಾನೆ. ಪ್ರಸ್ತುತ ಇವನನ್ನು  5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا