Urdu   /   English   /   Nawayathi

ವಿಮಾನಗಳ ಢಿಕ್ಕಿ: ಭಾರತೀಯ ಮೂಲದ ತರಬೇತಿ ಪೈಲಟ್ ಯುವತಿ ಸೇರಿ ನಾಲ್ಕು ಮಂದಿ ಸಾವು!

share with us

ವಾಷಿಂಗ್ಟನ್​: 19 ಜುಲೈ (ಫಿಕ್ರೋಖಬರ್ ಸುದ್ದಿ) ತರಬೇತಿ ವಿಮಾನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ ಯುವತಿ ಸೇರಿದಂತೆ ಒಟ್ಟು ನಾಲ್ಕು ಮಂದಿ ತರಬೇತಿ ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಮೂಲಗಳ ಪ್ರಕಾರ ಫ್ಲೋರಿಡಾದ ಸ್ಥಳೀಯ ವಿಮಾನ ತರಬೇತಿ ಶಾಲೆಗೆ ಸೇರಿದ ಎರಡು ಸಣ್ಣ ವಿಮಾನಗಳ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಕ್ಕೀಡಾಗ ವಿಮಾನಗಳು ಡೀನ್ ಅಂತಾರಾಷ್ಟ್ರೀಯ ವಿಮಾನ ಚಾಲನ ತರಬೇತಿ ಶಾಲೆಗೆ ಸೇರಿದ ವಿಮಾನಗಳಾಗಿದ್ದು, ಪೈಪರ್ ಪಿ-34 ಹಾಗೂ ಸೆಸ್ನಾ 172 ವಿಮಾನಗಳು ಅಪಘಾತಕ್ಕೀಡಾಗಿವೆ. ದುರ್ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ 4 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 

ಮೃತರನ್ನು ಟ್ರೈನಿ ಪೈಲೆಟ್​ ನಿಶಾ ಸೇಜ್ವಾಲ್​ (19), ಜಾರ್ಜ್ ಸ್ಯಾಂಚೆಜ್ (22), ರಾಲ್ಫ್​ ನೈಟ್​ (72) ಎಂದು ಗುರುತಿಸಲಾಗಿದ್ದು, ಪೈಕಿ ನಿಶಾ ಸೇಜ್ವಾಲ್ ಎಂಬ ಟ್ರೈನಿ ಪೈಲಟ್ ಭಾರತ ಮೂಲದವರು ಎಂದು ತಿಳಿದುಬಂದಿದೆ.  ಮೃತ ನಿಶಾ ಸೇಜ್ವಾಲ್ ಕಳೆದ 2017ರ ಸೆಪ್ಟೆಂಬರ್ ​ನಲ್ಲಿ ತರಬೇತಿಗೆ ಸೇರಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಪಘಾತದಲ್ಲಿ ನಾಲ್ಕನೇ ವ್ಯಕ್ತ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ 25ಕ್ಕೂ ಹೆಚ್ಚು ಇಂತಹ ಪ್ರಕರಣಗಳು ಈ ತರಬೇತಿ ಶಾಲೆಯಲ್ಲಿ ವರದಿಯಾಗಿದೆ ಎಂದು ಅಮೆರಿಕ ವಿಮಾನಯಾನ ವಿಭಾಗ ತಿಳಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا