Urdu   /   English   /   Nawayathi

ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟ ಹೊನ್ನಾವರ ಎ,ಎಸ್,ಐ

share with us

ಕುಮಟಾ: 18 ಜುಲೈ (ಫಿಕ್ರೋಖಬರ್ ಸುದ್ದಿ) ಕುಮಟಾ ವಿವೇಕಾನಗರದ ಬಾಳಿಗಾ ಕಾಲೇಜಿನ ಬಳಿ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎ,ಎಸ್,ಐ ಶಂಕರ ಗುಡಿಮನಿ(58) ಅವರು ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಮಟಾದಲ್ಲಿ ವಾಸವಾಗಿದ್ದ ಶಂಕರ ಗುಡಿಮನಿ ಅವರು ಮಂಗಳವಾರದಂದು ರಾತ್ರಿ ಪೇಟೆಯಿಂದ ಮನೆಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಸತತವಾಗಿ ಮಳೆಯಾಗುತ್ತಿದ್ದು ರಸ್ತೆಗೆ ಬಿದ್ದ ನಂತರ ಅವರ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದ ಕಾರಣ ಏಳಲಾಗದೇ ಅಲ್ಲಿಯೇ ಬಿದ್ದಿದ್ದು, ಅವರನ್ನು ಯಾರೂ ಗಮನಿಸದೇ ಸುಮಾರು 2ಗಂಟೆಯ ವರೆಗೆ ಅದೇ ಜಾಗದಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಮಳೆ ನಿಂತ ಬಳಿಕ ಸ್ಥಳೀಯರು ಅವರನ್ನು ಕಂಡು ಪೋಲೀಸರ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದ ಕಾರಣ ಆಸ್ಪತ್ರೆಯಲ್ಲಿ ಮೃಪಟ್ಟಿದ್ದಾರೆ. ಪ್ರಕರಣ ಕುಮಟಾ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا