Urdu   /   English   /   Nawayathi

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕುಟುಂಬದ ರಕ್ಷಣೆ:ವೈರಲ್‌ ವಿಡಿಯೋ

share with us

ಮುಂಬಯಿ: 17 ಜುಲೈ (ಫಿಕ್ರೋಖಬರ್ ಸುದ್ದಿ) ಭಾರೀ ಮಳೆಯಿಂದಾಗಿ ಪ್ರವಾಹ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗಿ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಸ್ಥಳೀಯರು ಸಮಯಪ್ರಜ್ಞೆ  ಮೆರೆದು ಹಗ್ಗದ ಸಹಾಯದಿಂದ ನಾಲ್ವರನ್ನೂ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ವಿಡಿಯೋ ಇದೀಗ ವೈರಲ್‌ ಆಗಿದೆ. ನವಿ ಮುಂಬಯಿಯ ತಾಲೋಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಾರು ಕಿರು ಸೇತುವೆಯೊಂದರಿಂದ ಕೊಚ್ಚಿ  ಹೋಗಿ ಪತಿ, ಪತ್ನಿ  ಮತ್ತು ಇಬ್ಬರು ಮಕ್ಕಳು ಅಪಾಯಕ್ಕೆ ಸಿಲುಕಿದ್ದರು. ನಾಲ್ವರು ಪ್ರಾಣ ಕೈಯಲ್ಲಿ ಹಿಡಿದು ಕಾರ್‌ನ ಟಾಪ್‌ ಮೇಲೆ ಕುಳಿತಿದ್ದರು. ಸ್ಥಳೀಯರ ನೆರವಿನಿಂದ ನಾಲ್ವರು ಬದುಕುಳಿದಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا