Urdu   /   English   /   Nawayathi

ಭಾರತೀಯ ನೌಕಾಪಡೆಗೆ ಸೆಡ್ಡು: ಪಾಕಿಗೆ ಚೀನದ 8 ಜಲಾಂತರ್ಗಾಮಿ

share with us

ಬೀಜಿಂಗ್‌/ಇಸ್ಲಾಮಾಬಾದ್‌: 17 ಜುಲೈ (ಫಿಕ್ರೋಖಬರ್ ಸುದ್ದಿ) ಪಾಕಿಸ್ಥಾನದ ಸರ್ವ ಋತು ಮಿತ್ರನಾಗಿರುವ ಚೀನ, ಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕಿಗೆ  ನೆರವಾಗುವ  ಉದ್ದೇಶದೊಂದಿಗೆ ಎಂಟು ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ. ಭಾರತದ ಬಳಿ ಪ್ರಕೃತ 16 ಜಲಾಂತರ್ಗಾಮಿಗಳು ಇವೆಯಾದರೆ ಪಾಕಿಸ್ಥಾನದ ಬಳಿ 10 ಇವೆ. ಇನ್ನೂ ಎಂಟು ಜಲಾಂತರ್ಗಾಮಿಗಳನ್ನು ಪಾಕಿಸ್ಥಾನ ಹೊಂದಿದಲ್ಲಿ ಭಾರತೀಯ ನೌಕಾಪಡೆಯನ್ನು ಮೀರಿಸುವ ನೌಕಾ ಶಕ್ತಿ ಅದಕ್ಕೆ ಪ್ರಾಪ್ತವಾಗುವುದೆಂಬ ಲೆಕ್ಕಾಚಾರ ಚೀನದ್ದಾಗಿದೆ. ಇದರಿಂದ ಜಲಾಂತರ್ಗತ ಸಮರದಲ್ಲಿ ಪಾಕಿಸ್ಥಾನಕ್ಕೆ ಭಾರತೀಯ ನೌಕಾ ಪಡೆಯನ್ನು ಎದುರಿಸುವುದು ಸುಲಭವಾದೀತೆಂದು ಅದು ಭಾವಿಸಿದೆ. 

ಚೀನ ಪಾಕಿಸ್ಥಾನಕ್ಕಾಗಿ ಈಗಾಗಲೇ ಎರಡು ರಿಮೋಟ್‌ ಸೆನ್ಸಿಂಗ್‌ ಸೆಟಲೈಟ್‌ಗಳನ್ನು ಯಶಸ್ವಿಯಾಗಿ ಚಾಲನೆಗೊಳಿಸಿದೆ. ಇದರಿಂದಾಗಿ ಪಾಕಿಸ್ಥಾನಕ್ಕೆ 50 ಬಿಲಿಯ ಡಾಲರ್‌ ವೆಚ್ಚದಲ್ಲಿ ಮೈದಳೆಯುತ್ತಿರುವ ಪಾಕಿಸ್ಥಾನ್‌ ಇಕಾನಮಿಕ್‌ ಕಾರಿಡಾರ್‌ ಯೋಜನೆಯ ಪ್ರಗತಿಯ ಮೇಲೆ ವಿಚಕ್ಷಣೆ ನಡೆಸುವುದು ಸಾಧ್ಯವಾಗಿದೆ. 

2011ರ ಆಗಸ್ಟ್‌ನಲ್ಲಿ ಪಾಕ್‌ ಸ್ಯಾಟ್‌ 1ಆರ್‌ ಸಂಪರ್ಕ ಉಪಗ್ರಹವನ್ನು ಚಾಲನೆಗೊಳಿಸುವ ಮೂಲಕ ಚೀನ ಉಭಯ ದೇಶಗಳ ನಡುವಿನ ಬಾಹ್ಯಾಕಾಶ ಸಹಕಾರ ಅಧ್ಯಾಯವನ್ನು ಆರಂಭಿಸಿದ್ದು ಇದೀಗ ಈ ಎರಡು ರಿಮೋಟ್‌ ಸೆನ್ಸೆಂಗ್‌ ಸೆಟಲೈಟ್‌ಗಳನ್ನು ಒದಗಿಸುವ ಮೂಲಕ ಬಾಹ್ಯಾಕಾಶ ಸಹಕಾರವನ್ನು ಹೊಸ ಮಟ್ಟಕ್ಕೆ ಒಯ್ದಿದೆ. 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا