Urdu   /   English   /   Nawayathi

ಕಾರವಾರ: ಪತ್ನಿಯ ಕೊಳೆತ ಶವದ ಜೊತೆ 7 ದಿನ ಕಳೆದ ಪತಿ!

share with us

ಕಾರವಾರ: 16 ಜುಲೈ (ಫಿಕ್ರೋಖಬರ್ ಸುದ್ದಿ) ಅನಾರೋಗ್ಯ ಪೀಡಿತ ಪತಿ ತನ್ನ ಪತ್ನಿಯ ಕೊಳೆತ ಶವದ ಪಕ್ಕದಲ್ಲೇ 7 ದಿನ ಕಳೆದ ಮನಕಲಕುವ ಘಟನೆ ನಗರದ ನ್ಯೂ ಕೆಎಚ್‌ಬಿ ಕಾಲೊನಿಯಲ್ಲಿ ನಡೆದಿದೆ. ಗಿರಿಜಾ ಕೋಲ್ಕರ್ ಮೃತ ಪಟ್ಟಿದ್ದು, ಆಕೆಯ ಪತಿ ಆನಂದ್ ಕೋಲ್ಕರ್ ಪಾರ್ಶ್ವ ವಾಯು ಪೀಡಿತರಾಗಿದ್ದಾರೆ. ಪತಿಯ ಆರೈಕೆಯಲ್ಲಿ ನಿರತರಾಗಿದ್ದ ಗಿರಿಜಾ ಪತಿ ಮಲಗಿದ್ದ ಮಂಚದ ಪಕ್ಕದ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೆಲ ವರ್ಷಗಳ ಹಿಂದೆ ಪಾಶ್ರ್ವವಾಯುವಿಗೆ ತುತ್ತಾಗಿದ್ದ ಆನಂದು ಹಾಸಿಗೆ ಹಿಡಿದಿದ್ದರು. ಕೆಲ ಮನೆಗಳಿಗೆ ಕೆಲಸಕ್ಕೆ ತೆರಳುತ್ತಿದ್ದ ಗಿರಿಜಾ ಅಲ್ಪ ದುಡಿಮೆಯಲ್ಲೇ ಮನೆ ನಿರ್ವಹಣೆ ಜೊತೆಗೆ ಪತಿಯ ಆರೈಕೆಯಲ್ಲಿ ತೊಡಗಿದ್ದಳು. 
7 ದಿನಗಳ ಹಿಂದೆ ಪತ್ನಿ ತೀರಿಕೊಂಡಿದ್ದೂ ತಿಳಿಯಲಿಲ್ಲ. ಅನ್ನಾಹಾರ ಇಲ್ಲದೇ ಜರ್ಜರಿತವಾಗಿ ಹಾಸಿಗೆಯಲ್ಲೆ ಮಲಗಿದ್ದ ಆತ ಪತ್ನಿಯ ಶವ ಪಕ್ಕದಲ್ಲಿದ್ದರೂ ಬೇರೆಯವರನ್ನು ಕರೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. 

ಗಿರಿಜಾಳ ಸಹೋದರ ಹೊನ್ನಾವರದ ಸುಬ್ರಹ್ಮಣ್ಯ ಮಡಿವಾಳ ವಾರದ ಹಿಂದೆ ಕರೆ ಮಾಡಿದ್ದರೂ ಅಕ್ಕ ಫೋನ್‌ ಕರೆ ಸ್ವೀಕರಿಸಿರಲಿಲ್ಲ. ನಂತರ ಎರಡು-ಮೂರು ಬಾರಿ ಕರೆ ಮಾಡಿದರೂ ಫೋನ್‌ ಸ್ವಿಚ್‌ ಆಫ್‌ ಇತ್ತು. ಇದರಿಂದ ಅನುಮಾನಗೊಂಡ ಸುಬ್ರಹ್ಮಣ್ಯ ಭಾನುವಾರ ಮನೆಗೆ ಬಂದಿದ್ದರು. ಬಾಗಿಲು ಬಡಿದರೂ ಅಕ್ಕ ತೆರೆದಿರಲಿಲ್ಲ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಮನೆಯಿಂದ ಹೊರಗೆ ಬರದೆ ಹಲವು ದಿನ ಕಳೆದಿದ್ದು ಗೊತ್ತಾಯಿತು. 

ನಗರ ಠಾಣೆ ಪೊಲೀಸರು, ನೆರೆಹೊರೆಯವರು ಬಾಗಿಲು ತೆರೆದು ನೋಡಿದಾಗ ಗಿರಿಜಾಳ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆನಂದು ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. 

ಕಳೆದ 4 ವರ್ಷಗಳಿಂದ ಆನಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ, ಗಿರಿಜಾ ದುಡಿದ ಹಣವೆಲ್ಲಾ ಆನಂದ್ ಔಷಧಕ್ಕೆ ಖರ್ಚಾಗುತ್ತಿತ್ತು, ಗಿರಿಜಾ ತಮ್ಮ ಸುಬ್ರಮಣ್ಯ ಆಗಾಗ್ಗೆ ಅಕ್ಕ  ನೋಡಲು ಬರುತ್ತಿದ್ದರು. ಆರೋಗ್ಯವಾಗಿದ್ದ ಆಕೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿರುವ ಆಘಾತದಿಂದ ಸುಬ್ರಮಣ್ಯ ಹೊರ ಬಂದಿಲ್ಲ,  ಆನಂದ ಸಂಬಂಧಿಗಳು ಕಾರವಾರದ ಸದಾಶಿವನಗರದಲ್ಲಿದ್ದರೂ ಅವರ್ಯಾರು ಇವರ ಬಗ್ಗೆ ಗಮನ ಹರಿಸುತ್ತಿರಲಿಲ್ಲ, ಆದರೆ ಆಗಾಗ್ಗೆ ಪೋನಿನನಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا