Urdu   /   English   /   Nawayathi

ಬ್ಯಾಗ್ ಕಸಿದು ಪರಾರಿಯಾಗುತ್ತಿದ್ದ ಕಳ್ಳರನ್ನು 2 ಕಿ.ಮೀ ಬೆನ್ನಟ್ಟಿ ಹಿಡಿದ ರಜನಿ ಅಭಿಮಾನಿ

share with us

ಮುಂಬಯಿ: 15 ಜುಲೈ (ಫಿಕ್ರೋಖಬರ್ ಸುದ್ದಿ) ನಗರದ ಖಲ್ಸಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ದಾವೆಂದರ್ ಕೌರ ಭಾಸಿನ್ ಅವರ ಹ್ಯಾಂಡ್ ಬ್ಯಾಗ್ ಕಸಿದು ಪರಾರಿಯಾಗುತ್ತಿದ್ದ ಖದೀಮನನ್ನು ತಮಿಳು ಸುದ್ದಿ ಪತ್ರಿಕೆಯ ಛಾಯಾಗ್ರಾಹಕರೊಬ್ಬರು 2 ಕಿ.ಮೀ ಬೆನ್ನಟ್ಟಿ ಹಿಡಿದ ಸಾಹಸಮಯ ಘಟನೆ ಶುಕ್ರವಾರ ನಡೆದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಪ್ಪಟ ಅಭಿಮಾನಿಯಾದ ಸುಧಾಕರ್ ನಾದರ್ ಅವರೇ ಈ ಸಾಹಸದ ಹೀರೋ. 
ಸುಧಾಕರ್ ಸಮಯಪ್ರಜ್ಞೆ ಹಾಗೂ ಶೌರ್ಯ ಕಾರ್ಯಕ್ಕೆ ಉಪ ಪ್ರಾಂಶುಪಾಲರು ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ಸಾಹಸಕ್ಕೆ ಮೆಚ್ಚಿ ನಗರದ ಉಪ ಜಿಲ್ಲಾಧಿಕಾರಿ ಎನ್‌.ಅಂಬಿಕಾ ಅವರು ಸನ್ಮಾನಿಸಿದ್ದಾರೆ. 
'ಶುಕ್ರವಾರ ಮುಂಜಾನೆ 6.30ರ ಸುಮಾರಿಗೆ ನಾನು ಪುತ್ರನನ್ನು ಸೇಂಟ್ ಜೋಸೆಫ್ ಶಾಲೆಗೆ ಬಿಟ್ಟು, ಕಿಂಗ್ಸ್ ಸರ್ಕಲ್‌ನ ಷಣ್ಮುಕಾನಂದ ಹಾಲ್ ಮಾರ್ಗದಲ್ಲಿ ಬರುತ್ತಿರುವಾಗ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಕಳ್ಳ ಕಳ್ಳ ಎಂದು ಕೂಗುತ್ತಿದ್ದ ಶಬ್ದ ಕಿವಿಗೆ ಬಿದಿತ್ತು. ಶಂಕಿತರಿಬ್ಬರು ಸರಗಳ್ಳರೇ ಇರಬೇಕು ಎಂದು ಅವರನ್ನು ಬೆನ್ನಟ್ಟಿ ಹೋದೆ' ಎಂದು ನಾದರ್ ಹೇಳಿಕೊಂಡಿದ್ದಾರೆ. 

ಸುಧಾಕರ್ ಶಂಕಿತ ಬೈಕರ್‌ಗಳನ್ನು ಬೆನ್ನತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. 'ನಾನು ಬೈಕರ್‌ಗಳನ್ನು ಬೆನ್ನಟ್ಟಿ ಹಿಡಿದು, ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರೊಬ್ಬರು ಸ್ಥಳಕ್ಕೆ ಧಾವಿಸಿ ಅಪ್ರಾಪ್ತ ಬಾಲಕನೊಬ್ಬನನ್ನು ಬಂಧಿಸಿದರು. ಪಕ್ಕದ ಸಂಗಮ್ ನಗರದಲ್ಲಿ ಮತ್ತಿಬ್ಬರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا