Urdu   /   English   /   Nawayathi

ದೆಹಲಿ: ಪೋಲೀಸ್ ಠಾಣೆಯ ಒಳಗೆ ಅಪ್ರಾಪ್ತ ಯುವತಿ ಆತ್ಮಹತ್ಯೆ

share with us
ನವದೆಹಲಿ: 15 ಜುಲೈ (ಫಿಕ್ರೋಖಬರ್ ಸುದ್ದಿ) ಪೋಲೀಸ್ ಠಾಣೆಯೊಳಗೆ ನುಗ್ಗಿದ ಅಪ್ರಾಪ್ತ ಯುವತಿಯೊಬ್ಬಳು ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ತಿಲಕ್ ವಿಹಾರ್ ಠಾಣೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಮೃತಪಟ್ಟ  ಯುವತಿಗೆ ಆಕೆಯ ನೆರೆಮನೆಯವರು ಸತತವಾಗಿ ಕಿರುಕುಳ ನೀಡುತ್ತಿದ್ದರು. ನೆರೆಮನೆಯಾತ ಆಕೆಯನ್ನು ತನ್ನ ಮಗನನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದರೆಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.

"ನನ್ನ ಮಗಳನ್ನು ನೆರೆಮನೆಯಾತ ಅಪಹರಣ ಮಾಡಿದ್ದರು. ಅವರು ಆಕೆಯು ತನ್ನ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರು. ಆದರೆ ನನ್ನ ಮಗಳಿನ್ನೂ ಚಿಕ್ಕವಳಾಗಿದ್ದ ಕಾರಣ ನಾನು ಅದಕ್ಕೆ ಸಮ್ಮತಿಸಿರಲಿಲ್ಲ. ಇದೀಗ ಪೋಲೀಸರು ನನಗೆ ಕರೆ ಮಾಡಿ ಬರ ಹೇಳಿದ್ದಾರೆ. ನೋಡಿದರೆ ಮಗಳು ಒಂದು ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ, ಇನ್ನೊಂದು ಕೋಣೆಯಲ್ಲಿ ನನ್ನ ಮೂವರು ಗಂಡುಮಕ್ಕಳನ್ನು ಕೂಡಿ ಹಾಕಲಾಗಿತ್ತು." ಎ ಎನ್ ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ತಾಯಿ ಹೇಳಿದರು.

ಪೊಲೀಸ್ ಆಯುಕ್ತ (ಪಶ್ಚಿಮ) ವಿಜಯ್ ಕುಮಾರ್ ಹೇಳಿದಂತೆ ಶನಿವಾರ ಸುಮಾರು 2 ಗಂಟೆಗೆ ಪೋಲೀಸ್ ಠಾಣೆಗೆ ಆಗಮಿಸಿದ ಯುವತಿ ’ತಾನು ಮನೆಗೆ ಹೋಗಲ್ಲ’ ಎಂದು ತಿಳಿಸಿದ್ದಾಳೆ.

"ಯುವತಿಯ ಕುಟುಂಬ ಮತ್ತು ಅವರ ನೆರೆಮನೆಯವರ ನಡುವೆ ಜಗಳವಾಗಿದೆ. ನಾವು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿದ್ದೆವು. ಆಗ ನಡೆದ ವಾದ ವಿವಾದ ಬಳಿಕ ನಾವು ಯುವತಿಯನ್ನು ಮನೆಗೆ ಕಳಿಸುವ ಬದಲಿಗೆ ನಾರಿ ನಿಕೇತನಕ್ಕೆ ಕಳಿಸಲು ನಿರ್ಧರಿಸಿದ್ದೆವು. ಆದರೆ ಠಾಣೆಯ ಕೋಣೆಯೊಳಕ್ಕೆ ಪ್ರವೇಶಿಸಿದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ"

ಒಳಗಿಂದ ಲಾಕ್ ಮಾಡಲಾಗಿದ್ದ ಬಾಗಿಲನ್ನು ಪೊಲೀಸರು ಮುರಿದು ನೋಡಲಾಗಿ ಯುವತಿ ನೇಣು ಹಾಕಿಕೊಂಡಿದ್ದದ್ದು ಪತ್ತೆಯಾಗಿದೆ. ಘಟನೆಯಸಂಬಂಧ ಮ್ಯಾಜಿಸ್ಟೀರಿಯಲ್ ವಿಚಾರಣೆ ಪ್ರಾರಂಭಿಸಲಾಗಿದೆ. ಪೋಲೀಸರೇನಾದರೂ ಇದರಲ್ಲಿ ಶಾಮೀಲಾಗಿದ್ದಾರೆಯೆ ಎನ್ನುವುದನ್ನು ಪತ್ತೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا