Urdu   /   English   /   Nawayathi

ಬಲೊಚಿಸ್ತಾನ್ ನಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ: ಮೃತರ ಸಂಖ್ಯೆ 130ಕ್ಕೆ ಏರಿಕೆ

share with us
 

ಪಾಕಿಸ್ತಾನ: 15 ಜುಲೈ (ಫಿಕ್ರೋಖಬರ್ ಸುದ್ದಿ) ಬಲೂಚಿಸ್ತಾನ್ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 130ಕ್ಕೆ ಏರಿಕೆ ಆಗಿದೆ. ದಾಳಿಯಿಂದಾಗಿ 200 ಜನರು ಗಾಯಗೊಂಡಿದ್ದಾರೆ. ಈ ಪೈಕಿ 20 ಜನರ ಸ್ಥಿತಿ ಗಂಭೀರವಾಗಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನಲ್ ವರದಿ ಮಾಡಿದೆ. ಬಲೊಚಿಸ್ತಾನದಲ್ಲಿ ಅವಾಮಿ ಪಕ್ಷದ ನಾಯಕ ಸಿರಾಜ್ ರೈಸಾನಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶವನ್ನು ಗುರಿಯಾಗಿಟ್ಟುಕೊಂಡು ನಡೆದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಕನಿಷ್ಠ 128 ಮಂದಿ ಸಾವನ್ನಪ್ಪಿದ್ದು, 200 ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಯಿಂದಾಗಿ ಬಲೋಚಿಸ್ತಾನ್ ನಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಕಡೆಗಳಲ್ಲಿ ವ್ಯಾಪಾರ- ವಾಣಿಜ್ಯ ರದ್ದುಗೊಂಡಿದೆ. ಈ ಪ್ರದೇಶಾದ್ಯಂತ ಹೈ ಆಲರ್ಟ್ ಘೋಷಿಸಲಾಗಿದೆ.

ಇಸ್ಲಾಂಮಿಕ್ ಸ್ಟೇಟ್ ಉಗ್ರ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಭದ್ರತೆಯನ್ನು ಬಿಗಿಗೊಳಿಸುವಲ್ಲಿ ಭದ್ರತಾ ಸಂಸ್ಥೆಗಳು ಒತ್ತಡಕ್ಕೆ ಸಿಲುಕಿದ್ದು, ಮುಂದಾಗುವ ಕಗ್ಗೊಲೆಯನ್ನು ತಡೆಯುವ ನಿಟ್ಟಿನಲ್ಲಿ ರಹಸ್ಯ ಪಡೆಗಳು ಗಮನ ಹರಿಸುತ್ತಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا