Urdu   /   English   /   Nawayathi

ಕೊಳಕು ನೀರಿನಿಂದ ಶುದ್ಧ ಕುಡಿವ ನೀರು, ಲೀಟರ್‌ಗೆ 50 ಪೈಸೆ: ಸುಲಭ್‌

share with us

ದರ್ಭಾಂಗ, ಬಿಹಾರ: 14 ಜುಲೈ (ಫಿಕ್ರೋಖಬರ್ ಸುದ್ದಿ) ನದಿ ಮತ್ತು ಕೊಳಗಳ ನೀರನ್ನು ಶುದ್ಧೀಕರಿಸಿ ಕುಡಿಯವುದಕ್ಕೆ ಯೋಗ್ಯಗೊಳಿಸಿ ಲೀಟರಿಗೆ 50 ಪೈಸೆ ದರದಲ್ಲಿ ಜನರಿಗೆ ಪೂರೈಸುವ ನವೋನ್ಮೇಷ ಯೋಜನೆಯೊಂದನ್ನು ಪ್ರಖ್ಯಾತ ಸಮಾಜ ಸೇವಾ ಸಂಘಟನೆಯಾಗಿರುವ ಸುಲಭ್‌ ಇಂಟರ್‌ನ್ಯಾಶನಲ್‌ ಇಂದು ಶನಿವಾರ ಇಲ್ಲಿ ಆರಂಭಿಸಿದೆ. 

ಈ ಸುಲಭ್‌ ಜಲ್‌ ಯೋಜನೆ ಈ ವರ್ಷ ಡಿಸೆಂಬರ್‌ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಲಿದೆ. ದಿನಂಪ್ರತಿ 8,000 ಲೀಟರ್‌ ಕುಡಿಯುವ ನೀರನ್ನು ಪೂರೈಸುವ ಸಾಮರ್ಥ್ಯವನ್ನು ಈ ಯೋಜನೆಯು ಹೊಂದಿದೆ. ಜನರಿಗೆ ಕೇವಲ 50 ಪೈಸೆಗೆ 1 ಲೀಟರ್‌ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ನಮ್ಮದಾಗಿದೆ ಎಂದು ಎನ್‌ಜಿಓ ಸುಲಭ್‌ ಇಂಟರ್‌ನ್ಯಾಶನಲ್‌ ಸ್ಥಾಪಕ ಬಿಂದೇಶ್ವರ್‌ ಪಾಠಕ್‌ ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا