Urdu   /   English   /   Nawayathi

ನವಾಜ್ ಷರೀಫ್ ಹಾಗೂ ಪುತ್ರಿಗೆ ಜೈಲಿನಲ್ಲಿ ಬಿ-ವರ್ಗದ ಸೌಲಭ್ಯ

share with us

ಇಸ್ಲಾಮಾಬಾದ್: 14 ಜುಲೈ (ಫಿಕ್ರೋಖಬರ್ ಸುದ್ದಿ) ಅಕ್ರಮ ಆಸ್ತಿ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿ ರಾವಲ್ಪಿಂಡಿಯ ಅತಿಭದ್ರತೆಯ ಅದಿಯಾಲ ಜೈಲು ಪಾಲಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಮತ್ತು ಆವರ ಪುತ್ರಿ ಮಾರ್ಯಾಮ್ ಅವರು ನಿನ್ನೆ ಕಾರಾಗೃಹದಲ್ಲಿ ಪ್ರಥಮ ರಾತ್ರಿ ಕಳೆದರು. ತಂದೆ ಮತ್ತು ಮಗಳಿಗೆ ಬಿ-ವರ್ಗದ ಸೌಲಭ್ಯಗಳನ್ನು ನೀಡಲಾಗಿದೆ ಮಾಧ್ಯಮ ವರದಿಗಳು ಹೇಳಿವೆ.

ಇವೆನ್‍ಫೀಲ್ಡ್ ಅಕ್ರಮ ಆಸ್ತಿ ಪ್ರಕರಣದ ಸಂಬಂಧ ನಿನ್ನೆ ಇವರಿಬ್ಬರನ್ನು ಲಾಹೋರ್ ಪೊಲೀಸರು ಬಂಧಿಸಿದ್ದರು. ಲಂಡನ್‍ನಿಂದ ಅಬುಧಾಬಿ ಮಾರ್ಗವಾಗಿ ಲಾಹೋರ್‍ಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ನವಾಜ್(68) ಮತ್ತು ಮಾರ್ಯಮ್(44) ಅವರನ್ನು ಪಾಕಿಸ್ತಾನದ ಭಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಬಂಧಿಸಿ, ರಾವಲ್ಪಿಂಡಿಯ ಸಹಲಾ ರೆಸ್ಟ್ ಹೌಸ್ ಉಪ ಜೈಲಿಗೆ ಸ್ಥಳಾಂತರಿಸಿತ್ತು. ಅಲ್ಲಿಂದ ಅವರನ್ನು ಅದಿಯಾಲ ಬಂದೀಖಾನೆಗೆ ಸ್ಥಳಾಂತರಿಸಲಾಯಿತು.

ನವಾಜ್ ಮತ್ತು ಅವರ ಪುತ್ರಿಗೆ ಜೈಲಿನಲ್ಲಿ ಬಿ-ಕ್ಲಾಸ್ ಸೌಲಭ್ಯ ಮತ್ತು ಸವಲತ್ತುಗಳನ್ನು ಒದಗಿಸಲಾಗಿದೆ. ಅವರಿಗೆ ಯಾವುದೇ ಇತರ ವಿಶೇಷ ಅನುಕೂಲಗಳನ್ನು ಕಲ್ಪಿಸಿಲ್ಲ. ಮುಂದಿನ ಆದೇಶದವರೆಗೆ ಇದು ಪೊರಿಯಲ್ಲಿರುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ತಂದೆ ಮತ್ತು ಮಗಳು ಲಾಹೋರ್‍ಗೆ ಆಗಮನದ ವೇಳೆ ನಡೆದ ರ್ಯಾಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಪಾಕ್‍ನ ಪಂಪೊಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا