Urdu   /   English   /   Nawayathi

ತೂಕ ಕಳಕೊಂಡರೂ, ಸದೃಢ ಬಾಲಕರು

share with us

ಮಾವೋಸಾಯಿ: 12 ಜುಲೈ (ಫಿಕ್ರೋಖಬರ್ ಸುದ್ದಿ) 18 ದಿನಗಳ ಕಾಲ ಕಾರ್ಗತ್ತಲ ಗುಹೆಯೊಳಗೆ, ಸರಿಯಾದ ಗಾಳಿ, ಆಹಾರವಿಲ್ಲದೆ ಕಾಲ ಕಳೆದು ಬಂದಿರುವ ಥಾಯ್ಲೆಂಡ್‌ನ‌ 12 ಮಂದಿ ಮಕ್ಕಳು 2 ಕೆ.ಜಿ.ಗಳಷ್ಟು ತೂಕ ಕಳೆದುಕೊಂಡಿದ್ದಾರೆ. ಆದರೂ, ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಗುಹೆಯೊಳಗೆ ಕೋಚ್‌ ಎಕಾಪೋಲ್‌ ಚಂತಾವಾಂಗ್‌ ಅವರು ಮಕ್ಕಳಿಗೆ ಧ್ಯಾನ ಮಾಡಲು ಹೇಳಿಕೊಟ್ಟು ತಾಳ್ಮೆಯಿಂದಿ ರಲು ಕಲಿಸಿದ್ದರು ಎಂಬುದು ತಿಳಿದುಬಂದಿದೆ. 

ಮೂಲತಃ ಬೌದ್ಧ ಬಿಕ್ಕುವಾಗಿರುವ ಎಕಾಪೋಲ್‌ ಧ್ಯಾನದ ಮೂಲಕ ಮನಸ್ಸಿನ ಹತೋಟಿ ಸಾಧಿಸುವುದನ್ನು ಕರಗತ ಮಾಡಿ ಕೊಂಡಿದ್ದರು. ಗುಹೆಯೊಳಗೆ ಸಿಲುಕಿ ಕೊಂಡಾಗ, ಜತೆಗಿದ್ದ 12 ಮಂದಿ ಫ‌ುಟ್ಬಾಲ್‌ ಶಿಷ್ಯಂದಿರಿಗೆ ತಮ್ಮ ಪಾಲಿನ ಆಹಾರವನ್ನೂ ನೀಡಿದ್ದರು, ಜತೆಗೆ ಧ್ಯಾನ ತರಗತಿಯನ್ನೂ ನಡೆಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ, ರಕ್ಷಣಾ ಕಾರ್ಯಕರ್ತರು ಗುಹೆಯೊಳಗೆ ಮೊದಲು ಮಕ್ಕಳನ್ನು ಕಂಡಾಗ ತೆಗೆದ ಫೊಟೋದಲ್ಲಿ ಅವರು ನಗುತ್ತಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲ, ಗುಹೆಯಿಂದ ಮೇಲೆದ್ದ ಮೇಲೆ ಆರೋಗ್ಯ ತಪಾಸಣೆ ನಡೆಸುತ್ತಿರುವ ವೈದ್ಯರೂ ಎಲ್ಲಾ ಮಕ್ಕಳು ಆರೋಗ್ಯಯುತವಾಗಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸ್ಥಿತಿ ಉತ್ತಮವಾಗಿದೆ ಎಂದು  ಥಾಯ್ಲೆಂಡ್‌ ಸರ್ಕಾರವೇ ಹೇಳಿದೆ.

ಇದೇ ವೇಳೆ, ಮಕ್ಕಳ ಮೊದಲ ಫೋಟೋ ಬುಧವಾರ ಬಿಡುಗಡೆಯಾಗಿದೆ. ಆಸ್ಪತ್ರೆಯ ಬೆಡ್‌ನ‌ಲ್ಲಿ ಮಲಗಿರುವ ಮಕ್ಕಳು ನಗುನಗುತ್ತಾ ಖುಷಿಯಾಗಿದ್ದಾರೆ. ಪೋಷಕರಿಗೂ ಭೇಟಿಗೆ ಅವಕಾಶ ನೀಡಲಾಗಿದೆ. ಆದರೆ, 2 ಮೀ. ದೂರದಲ್ಲಿ ಮಾತ್ರ ನಿಂತುಕೊಳ್ಳಬೇಕು. ಸೋಂಕು ತಗುಲದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರ ಕಾಲ ಮಕ್ಕಳು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ.

ಈ ಮಕ್ಕಳ ರಕ್ಷಣೆ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರವೂ ಇದೆ ಎಂಬುದು ಹೆಮ್ಮೆಯ ಸಂಗತಿ. ಪುಣೆ ಮೂಲದ ಕಿರ್ಲೋಸ್ಕರ್‌ ಬ್ರದರ್ಸ್‌ ಲಿ. ಎಂಬ ಕಂಪನಿ ಗುಹೆಯಿಂದ ನೀರನ್ನು ಹೊರಕ್ಕೆ ಪಂಪ್‌ ಮಾಡುವ ತಂತ್ರಜ್ಞಾನದ ನೆರವು ನೀಡಿತ್ತು. ಕಂಪನಿಯ ಸಿಬ್ಬಂದಿ ಜು.5ರಿಂದ ಸ್ಥಳದಲ್ಲೇ ಇದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا