Urdu   /   English   /   Nawayathi

ಪ್ರಾಣ ಪಣಕ್ಕಿಟ್ಟು ಗುಹೆಯೊಳಗಿದ್ದ ಮಕ್ಕಳನ್ನು ರಕ್ಷಿಸಿದ್ದ ವೈದ್ಯನ ಜೊತೆಗೇ ಆಟವಾಡಿದ ವಿಧಿ..!

share with us

ಮಾಯ್ ಸಾಯ್: 11 ಜುಲೈ (ಫಿಕ್ರೋಖಬರ್ ಸುದ್ದಿ) ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಬಾಲಕರು ಸೇರಿದಂತೆ ಹದಿಮೂರು ಮಂದಿ ಸಿಲುಕಿ ನರಳಾಡಿ ಕೊನೆಗೆ ಸುರಕ್ಷಿತವಾಗಿ ಬದುಕಿ ಬಂದ ಕತೆ ನಿಮಗೆ ಗೊತ್ತಿದೆ. ಆದರೆ ಅಲ್ಲಿದ್ದವರನ್ನೆಲ್ಲ ರಕ್ಷಿಸಿದ ಒಬ್ಬ ವೈದ್ಯನ ಜೊತೆ ವಿಧಿ ಆಟವಾಡಿದೆ. ಹೌದು ಜಗತ್ತಿನ ಅತ್ಯಂತ ಖ್ಯಾತನಾಮ ವೈದ್ಯರ ಪೈಕಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್ ಗುಹೆಯೊಳಗಿದ್ದವರನ್ನು ರಕ್ಷಿಸಿ ಹೊರ ಬಂದ ತಕ್ಷಣ ಅವರಿಗೊಂದು ಬಿಗ್ ಶಾಕ್ ಕಾದಿತ್ತು. ಪ್ರಾಣವನ್ನೇ ಪಣಕ್ಕಿಟ್ಟು ಬಾಲಕರನ್ನು ರಕ್ಷಿಸಿದ್ದ ಹ್ಯಾರಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ತಂದೆಯ ಸಾವಿನ ಸುದ್ದಿ. ಥಾಯ್ಲೆಂಡ್‌ನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದ ಕೆಲವೇ ಗಂಟೆಗಳಲ್ಲಿ ಹ್ಯಾರಿ ಅವರ ತಂದೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹ್ಯಾರಿಸ್ ಅವರು ಕೆಲಸ ಮಾಡುವ ಸಾಸ್ ಮೆಡ್‌ಸ್ಟಾರ್ ಆರೋಗ್ಯ ಸೇವೆಯ ಮುಖ್ಯಸ್ಥ ಆಂಡ್ರೂ ಪಿಯರ್ಸ್ ಹೇಳಿದ್ದಾರೆ. ನಾನು ಹ್ಯಾರಿ ಅವರೊಂದಿಗೆ ಮಾತನಾಡಿದ್ದೇನೆ. ಇದು ಅವರ ಕುಟುಂಬಕ್ಕೆ ದುಃಖದ ಸಮಯ. ಅತ್ಯಧಿಕ ದೈಹಿಕ ಹಾಗೂ ಭಾವನಾತ್ಮಕ ಸಾಮರ್ಥ್ಯ ಬೇಕಾಗಿದ್ದ ಒಂದು ವಾರದ ಅತ್ಯಂತ ಸಂಕೀರ್ಣ ಮತ್ತು ಅಂತಿಮವಾಗಿ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹ್ಯಾರಿ ಅವರ ನೋವಿನೊಂದಿಗೆ ನಾವೂ ಇದ್ದೇವೆ ಎಂದು ಅವರು ಹೇಳಿದ್ದಾರೆ.

ತಮಗೆ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಹ್ಯಾರಿ ಅವರಿಗೆ ಆಸ್ಟ್ರೇಲಿಯಾ ಸರ್ಕಾರ ಅತ್ಯುನ್ನತ ಗೌರವ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇನ್ನು ಕೆಲವರು ನೋಟುಗಳಲ್ಲಿ ಅವರ ಚಿತ್ರವನ್ನು ಹಾಕಬೇಕು ಎಂದೂ ಆಗ್ರಹಿಸಿದ್ದಾರೆ. ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಬಾಲಕರು ಸೇರಿದಂತೆ ಹದಿಮೂರು ಮಂದಿ ಸಿಲುಕಿಕೊಂಡಾಗ ವೈದ್ಯ ವೃತ್ತಿ ಜೊತೆ ನೀರಿನಾಳದಲ್ಲೂ ಮುಳುಗುವ ತರಬೇತಿ ಪಡೆದಿದ್ದ ಹ್ಯಾರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷಧ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿ, ಗುಹೆಯೊಳಗೇ ಎಲ್ಲ 12 ಮಕ್ಕಳು ಮತ್ತು ಕೋಚ್‌ಗೆ ಆರೋಗ್ಯ ಪರೀಕ್ಷೆ ಮಾಡಿದರು. ಅವರ ಈ ಸಾಹಸವನ್ನು ವಿಶ್ವವೇ ಕೊಂಡಾಡಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا